ತಿರುವನಂತಪುರ: ಯಾರು ಬೇಕಾದರೂ ದಸ್ತಾವೇಜು ಬರೆಯಬಹುದು ಎಂಬ ನಿಬಂಧನೆಯನ್ನು ಹಿಂಪಡೆಯುವ ಸಾಧ್ಯತೆಯಿದೆ. ಈ ಆದೇಶವನ್ನು ಹಿಂಪಡೆಯಬೇಕೆAಬ ಅರ್ಜಿದಾರರ ಬೇಡಿಕೆಯನ್ನು ತಾತ್ವಿಕವಾಗಿ ನೋಂದಣಿ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ದಸ್ತಾವೇಜು ಬರಹಗಾರರ ಸಂಘಟನೆಯ ಪ್ರತಿನಿಧಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಸಚಿವರು ಭರವಸೆ ನೀಡಿದರು. ನೋಂದಣಿ ಇಲಾಖೆ ಮಾಡಿರುವ ಸುಧಾರಣೆಗಳಿಂದ ದಸ್ತಾವೇಜು ಬರೆಯುವವರಿಗೆ ಉದ್ಯೋಗ ನಷ್ಟವಾಗದು.
ಇಲಾಖೆಯು ರಾಜ್ಯದ ಆದಾಯದ ಪ್ರಮುಖ ಮೂಲವಾಗಿದ್ದು, ಸುಧಾರಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟು ಮೈ ಲ್ಯಾಂಡ್ ಪೋರ್ಟಲ್ ಪರಿಚಯಿಸುವ ಉದ್ದೇಶದಿಂದ ನಡೆದ ಚರ್ಚೆಯಲ್ಲಿ ನೋಂದಣಿ ಇಲಾಖೆಯ ದಕ್ಷತೆ ಹೆಚ್ಚಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಸಚಿವರು ಹೇಳಿದರು. ಮತ್ತು ದಸ್ತಾವೇಜು ನೋಂದಣಿಗೆ ಸಂಬAಧಿಸಿದ ಏಕರೂಪದ ದಸ್ತಾವೇಜು ಭಾಷೆ ಮತ್ತು ಬರೆಯುವವರ ಸಮಸ್ಯೆಗಳನ್ನು ಪರಿಗಣಿಸಲಾಗುವುದು. ನೋಂದಣಿ ಇಲಾಖೆ ಮಹಾನಿರೀಕ್ಷಕ ಶ್ರೀಧನ್ಯ ಸುರೇಶ್ ಇಲಾಖೆಯಲ್ಲಿ ಅನುಷ್ಠಾನಗೊಳಿಸಿರುವ ಆಧುನೀಕರಣ ಕ್ರಮಗಳನ್ನು ವಿವರಿಸಿದರು.