ತಿರುವನಂತಪುರ: ಕೆಎಸ್‌ಆರ್‌ಟಿಸಿಯ ಆನೆ ಬಂಡಿ ಬಾರದ ಹಿನ್ನೆಲೆಯಲ್ಲಿ . ಪಿಎಸ್‌ಸಿ ನಡೆಸಿದ ಎಲ್‌ಡಿ ಕ್ಲರ್ಕ್ ಪರೀಕ್ಷೆಯಲ್ಲಿ ಐವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲು ಸಾಧ್ಯವಾಗದೆ ಹಿಂತಿರುಗಿದ್ದಾರೆ.
ಕೆಎಸ್ ೧೮೭ ಶಿಫ್ಟ್ ಸೂಪರ್ ಫಾಸ್ಟ್ ತಿರುವನಂತಪುರದಿAದ ಕಾಯಂಕುಳAಗೆ ಬೆಳಗ್ಗೆ ೮.೩೦ಕ್ಕೆ ಹೊರಡಬೇಕಾದದ್ದು ೮.೪೫ಕ್ಕೆ ಹೊರಟಿತು. ಅಟ್ಟಿಂಗಲ್ ಆಲಂಕೋಟ್ ತಲುಪಿದಾಗ ಬಸ್‌ನ ಟೈರ್ ಪಂಕ್ಚರ್ ಆಯಿತು. ನಂತರ ಒಂದೂವರೆ ಗಂಟೆಯ ನಂತರ ಅಟ್ಟಿಂಗಲ್ ಡಿಪೋದಿಂದ ಮತ್ತೊಂದು ಬಸ್ ಅನ್ನು ಅಭ್ಯರ್ಥಿಗಳಿಗಾಗಿ ಕಾಯಂಕುಳAಗೆ ಕಳಿಸಲಾಯಿತು.
ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಮತ್ತು ಬಸ್ ನ ನಿಧಾನಗತಿಯಿಂದಾಗಿ ಪರೀಕ್ಷೆ ಬರೆಯಲು ಹೊರಟವರು ಕೊಲ್ಲಂ ತಲುಪುವ ಹೊತ್ತಿಗೆ ೧.೪೫ ಆಗಿತ್ತು. ಕರುನಾಗಪಲ್ಲಿ, ಕಾಯಂಕುಳA, ಉತ್ತರ ತಹವಾ ಮುಂತಾದ ವಿವಿಧೆಡೆ ಪರೀಕ್ಷಾ ಕೇಂದ್ರಗಳನ್ನು ಅಭ್ಯರ್ಥಿಗಳು ತಲುಪುವ ವೇಳೆಗೆ ಸುಮಾರು ಮೂರು ಗಂಟೆಯಾಗಿತ್ತು.
೧ ಗಂಟೆಗೆ ಪರೀಕ್ಷಾ ಕೊಠಡಿಯಲ್ಲಿ ಹಾಜರಿದ್ದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಪರೀಕ್ಷೆಯ ಸಮಯ ಒಂದೂವರೆಯಿAದ ಮೂರೂವರೆವರೆಗೆ ಇತ್ತು. ಅಂತಿಮವಾಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ನಿರಾಸೆಯಿಂದ ಹಿಂತಿರುಗಿದರು. ಶೀಘ್ರ ದೋಷ ಸರಿಪಡಿಸಿದ್ದರೆ ಪರೀಕ್ಷೆ ಬರೆಯಬಹುದಿತ್ತೆಂದು ಅಭ್ಯರ್ಥಿಗಳು ನಿರಾಸೆ ವ್ಯಕ್ತಪಡಿಸಿದರು.