ಪತ್ತನಂತಿಟ್ಟ: ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಕುವೈತ್‌ನಲ್ಲಿ ಸಂಭವಿಸಿದೆ.
ಮನೆಯಲ್ಲಿ ಅಗ್ನಿ ಅವಘಡ: ಕುವೈತ್‌ನಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವು
0
ಜುಲೈ 20, 2024
Tags
ಪತ್ತನಂತಿಟ್ಟ: ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಕುವೈತ್‌ನಲ್ಲಿ ಸಂಭವಿಸಿದೆ.
ಮೃತರನ್ನು ಮ್ಯಾಥ್ಯೂ ಮುಜಾಕಲ್ ಹಾಗೂ ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.
ಮ್ಯಾಥ್ಯೂ ಅವರು ಉದ್ಯೋಗಕ್ಕಾಗಿ ಕುವೈತ್‌ನ ಅಬ್ಬಾಸಿಯಾದಲ್ಲಿ ಕಳೆದ 15 ವರ್ಷದಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಶುಕ್ರವಾರ ರಾತ್ರಿ ಅವರು ಮಲಗುವ ಕೋಣೆಯಲ್ಲಿ ಸಂಭವಿಸಿದ ಎ.ಸಿ ಯಂತ್ರದ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ದುರಂತ ಸಂಭವಿಸಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತದೇಹಗಳನ್ನು ಭಾರತಕ್ಕೆ ಯಾವಾಗ ತರಲಾಗುತ್ತದೆ ಎಂಬ ಮಾಹಿತಿ ನಮಗೆ ಇನ್ನೂ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೊಚ್ಚಿ ಬಳಿ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಜಾಕಲ್ ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಕಳೆದ ಗುರುವಾರವಷ್ಟೇ ಅವರು ತಮ್ಮ ಮಕ್ಕಳು ಹಾಗೂ ಪತ್ನಿ ಜೊತೆ ರಜೆ ಮುಗಿಸಿಕೊಂಡು ಕುವೈತ್‌ಗೆ ತೆರಳಿದ್ದರು.