ತಿರುವನಂತಪುರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇರಳದ ಯುವಕರಲ್ಲಿ ಭರವಸೆ ಮೂಡಿಸುವ ಬಜೆಟ್ ಮಂಡಿಸಿದ್ದಾರೆ ಎಂದು ವಿದೇಶಾಂಗ ಖಾತೆ ಮಾಜಿ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.
ಬಜೆಟ್‌ನಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಯುವಕರು ಕೇರಳದಿಂದ ಬೇರೆ ರಾಜ್ಯ ಹಾಗೂ ವಿದೇಶಗಳಿಗೆ ಉದ್ಯೋಗ ಅರಸಿ ಹೋಗುವ ಪರಿಸ್ಥಿತಿ ಇದೆ. ಆ ಪರಿಸ್ಥಿತಿ ಹೋಗಲಾಡಿಸಲು ಬಜೆಟ್‌ನಲ್ಲಿರುವ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ವಿ ಮುರಳೀಧರನ್ ಕೇಳಿಕೊಂಡರು.
ಬಜೆಟ್‌ನಲ್ಲಿ ಕೇರಳವನ್ನು ಕಡೆಗಣಿಸಲಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪದ ಬಗ್ಗೆಯೂ ವಿ.ಮುರಳೀಧರನ್ ಪ್ರತಿಕ್ರಿಯಿಸಿದ್ದಾರೆ. ಬಜೆಟ್‌ಗೂ ಮುನ್ನ ಇತರೆ ರಾಜ್ಯಗಳು ನಿರ್ದಿಷ್ಟ ಯೋಜನೆಗಳೊಂದಿಗೆ ಕೇಂದ್ರ ಹಣಕಾಸು ಸಚಿವರನ್ನು ಸಂಪರ್ಕಿಸುತ್ತವೆ. ಆದರೆ ಕೇರಳವು ಕೆಲವೇ ಅಂಕಿಅAಶಗಳನ್ನು ನೀಡಿದೆ. ಮಿತಿಯನ್ನು ಕಡಿತಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ವಾದವನ್ನು ಮತ್ತೆ ಹಣಕಾಸು ಸಚಿವರ ಮುಂದೆ ಮಂಡಿಸಲಾಯಿತು ಎಂದರು.
ಕೇರಳ ಸಲ್ಲಿಸಿರುವ ೨೪,೦೦೦ ಕೋಟಿ ಯೋಜನೆಗಳ ಪೈಕಿ ವಿಝಿಂಜA ಯೋಜನೆಯನ್ನು ವಿಶೇಷ ಯೋಜನೆ ಎಂದು ತೋರಿಸಲಾಗಿದೆ. ಸಿಲ್ವರ್ ಲೈನ್ ಯೋಜನೆಗೆ ಜನರಿಂದ ವ್ಯಾಪಕವಾಗಿ ವಿರೋಧವಿದೆ ಎಂದು ವಿ.ಮುರಳೀದರನ್ ಸೂಚಿಸಿದರು.
ಬಜೆಟ್ ನಲ್ಲಿ ಏಮ್ಸ್ ಘೋಷಣೆ ಮಾಡಿಲ್ಲ ಎಂದ ಮಾತ್ರಕ್ಕೆ ಕೇಂದ್ರ ನಕಾರಾತ್ಮಕ ನಿಲುವು ತಳೆದಿದೆ ಎಂದರ್ಥವಲ್ಲ. ಎಐಐಎಂಎಸ್‌ಗೆ ಸರಿಯಾದ ಮಾನದಂಡವನ್ನು ಅನುಸರಿಸಿ ರಾಜ್ಯವು ಪ್ರಸ್ತಾವನೆಯನ್ನು ನೀಡಿದೆಯೇ ಎಂದು ಪರಿಶೀಲಿಸಬೇಕು. ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು. ಕೇರಳಕ್ಕೆ ವಿಪತ್ತು ಪರಿಹಾರ ನಿಧಿ ಮಂಜೂರು ಮಾಡಲಾಗಿದೆ. ಹಿಂದಿನ ವರ್ಷಗಳಲ್ಲಿ ಕೇರಳಕ್ಕೆ ಮೀಸಲಿಟ್ಟ ಹಣವೂ ಖರ್ಚಾಗಿರಲಿಲ್ಲ ಎಂದರು.
ಬಡ್ಡಿ ರಹಿತ ಸಾಲ ಯೋಜನೆಯನ್ನು ರಾಜ್ಯಗಳಿಗೆ ವಿಸ್ತರಿಸುವ ನಿರ್ಧಾರದ ಲಾಭವನ್ನು ಕೇರಳ ಪಡೆಯಬಹುದು. ರಾಜ್ಯಗಳಿಗೆ ರೂ.೧.೫ ಲಕ್ಷ ಕೋಟಿ ಬಡ್ಡಿ ರಹಿತ ಸಾಲವನ್ನು ಮೀಸಲಿಡಲಾಗಿದೆ. ಕಿಫ್ಬಿಯಲ್ಲಿ ಬಡ್ಡಿಯನ್ನು ಪಾವತಿಸುವ ಬದಲು, ಕೇರಳವು ಪ್ರಸ್ತುತ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ಮಾಡಬಹುದು ಮತ್ತು ಐವತ್ತು ವರ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ಪಡೆಯಬಹುದು. ಆ ಮೊತ್ತವನ್ನು ಕೇರಳದ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ದೇಶದೊಳಗಿನ ಸಾರ್ವಜನಿಕ ಮಾರುಕಟ್ಟೆಯಿಂದ ಮತ್ತು ಹೊರಗಿನಿಂದ ಸಾಲ ಮಾಡಬೇಕಾದ ಪರಿಸ್ಥಿತಿಯನ್ನು ತಪ್ಪಿಸಬಹುದು ಎಂದು ಸೂಚಿಸಿದರು.
ಶಿಕ್ಷಣ ಸಾಲದ ವಿಚಾರದಲ್ಲಿ ಮಾಡಿರುವ ಘೋಷಣೆಯು ಕೇರಳದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಬೆಳೆಸಲು ನೆರವಾಗಲಿದೆ. ಅಡಮಾನ ಸಾಲದ ಮಿತಿಯನ್ನು ೧೦ ಲಕ್ಷದಿಂದ ೨೦ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ೧೦೦ ಕೋಟಿ ರೂ.ಗಳ ಸಾಲದ ಗ್ಯಾರಂಟಿ ಘೋಷಣೆ ಬಗ್ಗೆ ಹೇಳಿದರು. ಸಣ್ಣ ಉದ್ದಿಮೆಗಳನ್ನು ಆರಂಭಿಸುವವರು ಪಡೆದ ಸಾಲಕ್ಕೆ ಸರ್ಕಾರ ಖಾತರಿ ನೀಡುವ ಯೋಜನೆ ಇದಾಗಿದೆ. ಸ್ಟಾರ್ಟ್ಅಪ್‌ಗಳಿಗೆ ಇದ್ದ ಏಂಜೆಲ್ ತೆರಿಗೆಯನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಕೇರಳಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದರು.