ಕಾಸರಗೋಡು: ಚುನಾವಣೆ ಸಂದರ್ಭ ವರ್ಗಾವಣೆಗೊಳಿಸಲಾಗಿದ್ದ ಪೊಲೀಸ್ ಅಧಿಕಾರಿಗಳನ್ನು ಮತ್ತೆ ಜಿಲ್ಲೆಯಲ್ಲಿ ನೇಮಿಸಲಾಗಿದೆ. ಡಿವೈಎಸ್‍ಪಿ ಪಿ. ಬಾಲಕೃಷ್ಣನ್ ನಾಯರ್ ಅವರಿಗೆ ಬಡ್ತಿ ನೀಡಿ, ಕಾಸರಗೋಡು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ಸ್‍ಪೆಕ್ಟರ್‍ಗಳಾದ ಎಸ್. ಚಂದ್ರಕುಮಾರ್ ಅವರಿಗೆ ಬಡ್ತಿ ನೀಡಿ ಕಾಸರಗೋಡು ನಾರ್ಕೋಟಿಕ್ ಸೆಲ್ ಡಿವೈಎಸ್‍ಪಿ, ಟಿ. ಉತ್ತಮ್‍ದಾಸ್ ಅವರಿಗೆ ಕ್ರೈಂ ಬ್ರಾಂಚ್ ಡಿವೈಎಸ್‍ಪಿಯಾಗಿ ಬಡ್ತಿ ನೀಡಲಾಗಿದೆ. ಕಾಸರಗೋಡು ಡಿವೈಎಸ್‍ಪಿಯಾಗಿ ಸಿ.ಕೆ ಸುನಿಲ್‍ಕುಮಾರ್ ಅವರನ್ನು ನೇಮಿಸಲಾಗಿದೆ. ಹೊಸದುರ್ಗ ಡಿವೈಎಸ್ಪಿಯಾಗಿ ಬಾಬು ಪೆರಿಙÉೂೀತ್, ಬೇಕಲ ಡಿವೈಎಸ್‍ಪಿಯಾಗಿ ವಿ.ಮನೋಜ್ ಅವರನ್ನು ನೇಮಿಸಲಾಗಿದೆ.