ಕಾಸರಗೋಡು: ನಗರದ ವಿವಿಧೆಡೆ ಸರಣಿ ಕಳ್ಳತನ ನಡೆದಿದ್ದು, ನಗದು, ಸಾಮಗ್ರಿ ದೋಚಲಾಗಿದೆ. ಕಳ್ಳರ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಬೆರಳಚ್ಚುಗಳನ್ನೂ ಪತ್ತೆಹಚ್ಚಲಾಗಿದೆ. ಕಂಬಾರು ನಿವಾಸಿ, ಅಬ್ದುಲ್ ನಿಜಾರ್ ಎಂಬವರ ಕರಂದಕ್ಕಾಡಿನಲ್ಲಿರುವ ಸಿಟಿ ಕೂಲ್ ಹೆಸರಿನ ಇಲೆಕ್ಟ್ರಾನಿಕ್ ಅಂಗಡಿಗೆ ನುಗ್ಗಿದ ಕಳ್ಳರು 30ಸಾವಿರ ರೂ. ನಗದು ಮತ್ತು 10ಸಾವಿರ ರೂ. ಬೆಲೆಯ ಮಿಕ್ಸಿ ಕಳವುಗೈದಿದ್ದಾರೆ. ಅಂಗಡಿ ಶಟರನ್ನು ಎಳೆದು ಬಗ್ಗಿಸಿ ನುಗ್ಗಿ ಕಳವು ನಡೆಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ತೆರುವತ್ ನಿವಾಸಿ ಶಂಸೀರ್ ಎಂಬವರ ತಾಯಲಂಗಾಡಿಯಲ್ಲಿ ಕಾರ್ಯಾಚರಿಸುವ ಹೈಪರ್ ಮಾರ್ಕೆಟ್ ಒಂದಕ್ಕೆ ನುಗ್ಗಿದ ಕಳ್ಳರು 55ಸಾವಿರ ರೂ, ನಗದು ದೋಚಿದ್ದಾರೆ. ಇನ್ನೊಂದೆಡೆ ಕರಂದಕ್ಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಿಸುವ ಮಲಪ್ಪುರಂ ನಿವಾಸಿ ಮಹಮ್ಮದ್‍ಕುಟ್ಟಿ ಎಂಬವರ ಡ್ರೈಫ್ರುಟ್ಸ್ ಅಂಗಡಿ, ಸನಿಹದ ಎ.ಟಿ ರಸ್ತೆ ತಿರುವಿನಲ್ಲಿ ಚಟುವಟಿಕೆ ನಡೆಸುತ್ತಿರುವ ಚೇರಂಗೈ ನಿವಾಸಿ ಇಕ್ಬಾಲ್ ಎಂಬವರ ಮಾಲಿಕತ್ವದ ಬಟ್ಟೆ ಮಾರಾಟ ಮಳಿಗೆ ನುಗ್ಗಿ ಕಳವಿಗೆ ಯತ್ನಿಸಲಾಗಿದೆ. ಈ ಎರಡೂ ಅಂಗಡಿಗಳ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಮುಖವನ್ನು ಬಟ್ಟೆಯಿಂದ ಮರೆಮಾಚಿದ ಸ್ಥಿತಿಯಲ್ಲಿ ಮೂವರು ಸುತ್ತಾಡುತ್ತಿರುವ ದೃಶ್ಯಾವಳಿ ಹಾಗೂ ಬೆರಳಚ್ಚು ಪೊಲೀಸರು ಸಂಗ್ರಹಿಸಿದ್ದಾರೆ.
ಕಾಸರಗೋಡು ನಗರದಲ್ಲಿ ಸರಣಿ ಕಳ್ಳತನ, ಕಳವಿಗೆತ್ನ-ಸಿಸಿ ಟಿವಿ ದೃಶ್ಯ, ಬೆರಳಚ್ಚು ಪತ್ತೆ
0
ಜುಲೈ 02, 2024