ಸಮರಸ ಚಿತ್ರಸುದ್ದಿ: ಕಾಸರಗೋಡು: ಸಿರಿಬಾಗಿಲು ಪೆರಿಯಡ್ಕದ ಎಂಪಿ ಇಂಟರ್‌ನ್ಯಾಶನಲ್ ಶಾಲಾ ವಿದ್ಯಾರ್ಥಿಗಳು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಮ್ಯೂಸಿಯಂಗೆ ಭೇಟಿ ನೀಡಿ, ಯಕ್ಷಗಾನದ ವಿವಿಧ ಮಾದರಿ, ಕೀರ್ತಿಷೇಶ ಕಲಾವಿದರ ಭಾವಚಿತ್ರ ಹಾಗೂ ಇನ್ನಿತರ ವಿವರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಶಾಲಾ ಪ್ರಾಂಶುಪಾಲ ಡಾ. ಅಬ್ದುಲ್ ಜಲೀಲ್ ಅವರ ನಿರ್ದೇಶ ಪ್ರಕಾರ ಶಾಲಾ ಪಠ್ಯದ ಅಧ್ಯಯನ ವಿಚಾರದಲ್ಲಿ ಭೇಟಿ ಆಯೋಜಿಸಲಾಗಿತ್ತು. ಪ್ರತಿಷ್ಠಾನದ ಅದ್ಯಕ್ಷರು ಹಾಗೂ ಸದಸ್ಯರು ಯಕ್ಷಗಾನದ ವೇಷಭೂಷಣದ ವೈಶಿಷ್ಟ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಕರಾದ ಎಂ.ಎಸ್ ಸುಜನ್‌ಪಾಲ್ ಹಾಗೂ ಪಿ. ಸಫುಬಾನ್ ನೇತೃತ್ವ ನೀಡಿದ್ದರು.