HEALTH TIPS

ಕುಸಿತದ ಭೀತಿಯಲ್ಲಿ ಕಡಪ್ಪು ಕಿರುಸೇತುವೆ-ದುರಸ್ತಿ ಮರೆತಲ್ಲಿ ಜನತೆಗೆ ಸಂಕಷ್ಟ

                 ಪೆರ್ಲ: ಎಣ್ಮಕಜೆ ಪಂಚಾಯಿತಿಯ ಗೋಳಿತ್ತಡ್ಕದಿಂದ ಕಡಪ್ಪು ಹಾದಿಯಾಗಿ ಖಂಡಿಗೆ ತೆರಳುವ ರಸ್ತೆ ಕಡಪ್ಪು ಪ್ರದೇಶದಲ್ಲಿ ಕುಸಿತದ ಭೀತಿ ಎದುರಾಗಿದೆ. ಪೆರ್ಲ-ವಿಟ್ಲ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪೆರ್ಲ ಸನಿಹದ ಗೋಳಿತ್ತಡ್ಕದಿಂದ ಖಂಡಿಗೆ ಸಂಚರಿಸುವ ಈ ರಸ್ತೆಗೆ ಕಡಪ್ಪು ಪ್ರದೇಶದಲ್ಲಿ ನಿರ್ಮಿಸಿರುವ ಕಿರು ಸೇತುವೆ ತಳಭಾಗ ಬಿರುಸಿನ ಮಳೆಗೆ ಕುಸಿಯಲಾರಂಭಿಸಿದೆ. ಆರಂಭದಲ್ಲಿ ಒಂದೆರಡು ಕಲ್ಲು ಕಿತ್ತುಕೊಳ್ಳಲಾರಂಭಿಸಿದ್ದು, ಪ್ರಸಕ್ತ ರಸ್ತೆಯ ಅರ್ಧ ಭಾಗ ಕುಸಿದು ಬಿದ್ದಿದೆ. ಈ ಪ್ರದೇಶದಲ್ಲಿ ನಿರಂತರ ನೀರಿನ ಹರಿವು ಇರುವುದರಿಂದ ಕಿರು ಸೇತುವೆ ಯಾವುದೇ ಸಂದರ್ಭ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ.

              ಕಡಪ್ಪು, ಅಬ್ಬಿಕಟ್ಟೆ, ದೇವಲೋಕ ಸೇರಿದಂತೆ ಈ ಪ್ರದೇಶದ ಬಹುತೇಕ  ಮಂದಿ ಈ ರಸ್ತೆಯನ್ನೇ ಆಶ್ರಯಿಸುತ್ತಿದ್ದು, ಕಿರುಸೇತುವೆ ಕುಸಿದಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ದಿನವೊಂದಕ್ಕೆ ನೂರಾರು ವಾಹನಗಳು ಈ ಹಾದಿಯಾಗಿ ಸಂಚರಿಸುತ್ತಿದೆ. ಕಿರುಸೇತುವೆ ಕುಸಿದಲ್ಲಿ ಸೇತುವೆ ಇನ್ನೊಂದುಪಾಶ್ರ್ವದಲ್ಲಿರುವವರು ಸುತ್ತುಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಮಳೆ ದಿನಕಳೆದಂತೆ ಬಿರುಸುಗೊಳ್ಳುತ್ತಿರುವುದರಿಂದ ಸೇತುವೆ ಪೂರ್ಣಪ್ರಮಾಣದಲ್ಲಿ ಕುಸಿಯದಂತೆ ತಾತ್ಕಾಲಿಕ ದುರಸ್ತಿ ನಡೆಸುವುದು ಅನಿವಾರ್ಯವಾಗಿದೆ.

               ಎಣ್ಮಕಜೆ ಪಂಚಾಯಿತಿಯ 15ನೇ ವಾರ್ಡಿನಲ್ಲಿ ಕಿರುಸೇತುವೆಯಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಈ ಬಗ್ಗೆ ತುರ್ತು ಗಮನಹರಿಸಿ ಕಿರುಸೇತುವೆ ದುರಸ್ತಿಗೆ ಮುಂದಾಗುವಂತೆ ಸ್ಥಳೀಯ ನಿವಾಸಿಗಳು ಸಂಬಂಧಪಟ್ಟವರ್ನು ಆಗ್ರಹಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries