ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಫಾ. ಅನಿಲ್ ಐವನ್ ಪಿರೇರ ಮೊಬೈಲ್ ಪೋನ್ ಅತಿಬಳಕೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಹೆತ್ತವರಿಗೆ ಮಾಹಿತಿ ನೀಡಿದರು.ನಂತರ ನೂತನ ಪಿ ಟಿ ಎ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪಿ ಟಿ ಎ ಅಧ್ಯಕ್ಷರಾಗಿ ಸೀತಾರಾಮ್ ಬೆರಿಂಜ ಹಾಗೂ ಮಾತೃಸಂಘದ ಅಧ್ಯಕ್ಷೆಯಾಗಿ ಸೀತಾಲಕ್ಷ್ಮಿ, ಬೆಂಬಲ ಸಮೀತಿಯ ಸದಸ್ಯರಾಗಿ ಜಯಪ್ರಕಾಶ್ ಆಯ್ಕೆಯಾದರು. ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಸಂಚಾಲಕ ಫಾ. ಬೇಸಿಲ್ ವಾಸ್ ಸಂದೇಶ ನೀಡಿದರು.