ಬದಿಯಡ್ಕ: ಮುಳ್ಳೇರಿಯಾ ಮಂಡಲಾಂತರ್ಗತ ನೀರ್ಚಾಲು ಹವ್ಯಕ ವಲಯದ ಜುಲೈ ತಿಂಗಳ ಸಭೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಧ್ವಜಾರೋಹಣ, ಗುರುವಂದನೆ, ಗೋ ವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಶಿಮ್ಲಡ್ಕ ಗತಸಭೆಯ ವರದಿ ನೀಡಿದರು. ಕೋಶಾಧಿಕಾರಿ ಈಶ್ವರ ಭಟ್ ಹಳೆಮನೆ ಲೆಕ್ಕಪತ್ರ ಮಂಡಿಸಿದರು. ಮಹಾಮಂಡಲ ಕಾರ್ಯಸೂಚಿಯನ್ನು ಹಾಗೂ ಮಂಡಲದ ಮಾಹಿತಿಯನ್ನು ಸಭೆಗೆ ತಿಳಿಸಲಾಯಿತು. ಜುಲೈ 21 ರಿಂದ ಗೋಕರ್ಣದ ಅಶೋಕೆಯಲ್ಲಿ ಆರಂಭ ವಾಗಲಿರುವ ಶ್ರೀ ಸಂಸ್ಥಾನದವರ ಅನಾವರಣ ಚಾತುರ್ಮಾಸ್ಯದ ವಿವರ ನೀಡಲಾಯಿತು ಮತ್ತು ಆಮಂತ್ರಣ ಪತ್ರಿಕೆಗಳನ್ನು ಸಭೆಯಲ್ಲಿ ವಿತರಿಸಲಾಯಿತು.
ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ ಮಾತನಾಡಿ ವಿವಿಧ ಮಾಹಿತಿಗಳನ್ನು ನೀಡಿದರು. ಮುಳ್ಳೇರಿಯಾ ಮಂಡಲದ ವಿ.ವಿ.ವಿ. ಸಮಿತಿಯ ಜಯದೇವ ಖಂಡಿಗೆ ಸಭೆಯಲ್ಲಿ ಉಪಸ್ಥಿತರಿದ್ದು ವಿ.ವಿ.ವಿ ಹಾಗೂ ಸ್ವರ್ಣಪಾದುಕಾ ಪೂಜೆಯ ಕುರಿತು ಮಾಹಿತಿ ನೀಡಿದರು. ಜುಲೈ 28 ರಂದು ನೀರ್ಚಾಲು ವಲಯದಲ್ಲಿ ಮಂಡಲ ಸಭೆ ಜರುಗಲಿದ್ದು ಕಾರ್ಯಕ್ರಮದ ಆಯೋಜನೆಯ ಕುರಿತು ಚರ್ಚಿಸಲಾಯಿತು. ರಾಮತಾರಕಮಂತ್ರ, ಶಾಂತಿಮಂತ್ರ, ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.