ಸಮರಸ ಚಿತ್ರಸುದ್ದಿ: ಮಧೂರು: ಸಿರಿಬಾಗಿಲು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಆಗಸ್ಟ್ 16 ರಂದು ನಡೆಯಲಿರುವ ಹತ್ತನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು. ಶ್ರೀ ಕ್ಷೇತ್ರದ ಅರ್ಚಕ ಪ್ರಭಾಕರ ಕಾರಂತ, ಆಡಳಿತ ಸಮಿತಿಯ ಅಧ್ಯಕ್ಷ ಶೀನ ಶೆಟ್ಟಿ ಕಜೆ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ, ಜಯರಾಮ ರೈ, ಬಾಲಕೃಷ್ಣ ಶೆಟ್ಟಿ ನೀರಾಳ, ಗಣೇಶ ಭಂಡಾರಿ ಮಾಯಿಪ್ಪಾಡಿ, ರಾಜೇಶ್ ಶೆಟ್ಟಿ ಬೆದ್ರಡ್ಕ, ಚಂದ್ರ ಶೆಟ್ಟಿ ಪುಳ್ಕೂರು ಹಾಗೂ ಕ್ಷೇತ್ರದ ವರಮಹಾಲಕ್ಷ್ಮಿ ವ್ರತಾಚರಣೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುಳ್ಕೂರು: ವರಮಹಾಲಕ್ಷ್ಮಿ ವ್ರತ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಜುಲೈ 19, 2024