ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ. ಯು.ಪಿ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ/ನಾಯಕಿಯ ಆಯ್ಕೆ ಹಾಗೂ ಪಾರ್ಲಿಮೆಂಟ್ ರೂಪಿಕರಣ ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.
8 ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾದ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಇವರಿಗೆ ನಾಮ ಪತ್ರ ಸಲ್ಲಿಸಿ ಕಣದಲ್ಲಿದ್ದರು. ಜುಲೈ 10 ರಂದು ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನದಲ್ಲಿ ಮತದಾನ ಮಾಡುವ ಮೂಲಕ ಆಧುನಿಕ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ನ ಮತದಾನದ ರೀತಿಯನ್ನು ತಿಳಿದುಕೊಂಡರು. ಒಟ್ಟು 504 ವಿದ್ಯಾರ್ಥಿಗಳು ಮತ ಚಲಾಯಿಸಿದರು. 7ನೇ ತರಗತಿಯ ಮೂಸ ರಾಹಿಫ್ ಶಾಲಾ ನಾಯಕನಾಗಿ ಹಾಗೂ ಅಮ್ನ ಫಾತಿಮಾ ಉಪನಾಯಕಿಯಾಗಿ ಆಯ್ಕೆಗೊಂಡರು. ಶಾಲಾ ದೈಹಿಕ ಶಿಕ್ಷಕ ಎಸ್. ಎಸ್.ಪ್ರಸಾದ್ ಹಾಗೂ ಎಸ್.ಆರ್.ಜಿ ಸಂಚಾಲಕÀ ಶಿಹಾಬುದ್ದೀನ್ ಚುನಾವಣೆಯ ನೇತೃತ್ವ ವಹಿಸಿದ್ದರು.