ಸಿಯೋಲ್: ಉತ್ತರ ಕೊರಿಯಾವು ಸೋಮವಾರ ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸಿದೆ.
'ಜಾಂಗ್ಯೋನ್‌ನ ನಗರದಿಂದ ಈಶಾನ್ಯ ದಿಕ್ಕಿಗೆ 2 ಕ್ಷಿಪಣಿಗಳನ್ನು ಹಾರಿಸಲಾಗಿದೆ. ಮೊದಲನೇ ಕ್ಷಿಪಣಿ 600 ಕಿ.ಮೀ ದೂರ ಚಲಿಸಿದ್ದು, ಎರಡನೇ ಕ್ಷಿಪಣಿ 120 ಕಿ.ಮೀ ದೂರ ಚಲಿಸಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಎಲ್ಲಿ ಭೂಸ್ಪರ್ಶ ಮಾಡಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
'ಎರಡು ಕ್ಷಿಪಣಿಗಳು ಸಮುದ್ರಕ್ಕೆ ಬೀಳುವಂತೆ ಯೋಜನೆ ರೂಪಿಸಲಾಗಿತ್ತು, ಆದರೆ ಮೊದಲನೇ ಕ್ಷಿಪಣಿ ಮಾತ್ರ ಸಮುದ್ರಕ್ಕೆ ಬಿದ್ದಿದೆ' ಎಂದು ದಕ್ಷಿಣ ಕೊರಿಯಾದ ಮಾಧ್ಯಮವೊಂದು ವರದಿ ಮಾಡಿದೆ.
ಎರಡನೇ ಕ್ಷಿಪಣಿಯು ಉತ್ತರದ ಭೂಭಾಗಕ್ಕೆ ಅಪ್ಪಳಿಸಿದ್ದು, ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು ದಕ್ಷಿಣ ಕೊರಿಯಾ ಸೇನೆಯ ಅನಧಿಕೃತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್‌ನ ಮಿಲಿಟರಿ ತಾಲೀಮು ಮುಕ್ತಾಯವಾದ ಬೆನ್ನಿಗೆ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿದೆ.