ಕಾಸರಗೋಡು: ಸಂಗೀತದ ಕಲಿಕೆ ಸಂಸ್ಕಾರಯುತ ಜೀವನಕ್ಕೆ ಹಾದಿಮಾಡಿಕೊಡುವುದಾಗಿ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆ ವ್ಯವಸ್ಥಾಪಕರೂ ಗಾಯಕರೂ ಆದ ಕೆ.ಜಿಶ್ಯಾನುಭೋಗ್ ತಿಳಿಸಿದ್ದಾರೆ.
ಅವರು ಚಂದ್ರಗಿರಿ ಮೇಘರಂಜನ ನೇತೃತ್ವದಲ್ಲಿ ಜರುಗಿದ ಭಾವ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಕಲಿಕೆಗೆ ಅಗಾಧ ಪರಿಶ್ರಮ ಅಗತ್ಯ. ಶ್ರುತಿ, ತಾಳ, ಲಯಬದ್ದವಾಗಿ ಸಂಗೀತವನ್ನು ಅಭ್ಯಾಸಮಾಡಬೇಕಾಗುತ್ತದೆ. ಅದನ್ನೇ ನಮ್ಮಜೀನದಲ್ಲಿ ಅಳವಡಿಸಿದಾಗ ನಾವು ಸಭ್ಯರಾಗಿ ಬದುಕಬಹುದು ಎಂದು ತಿಳಿಸಿದರು.
ರಂಗಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಮಾತನಾಡಿ ಕಲಾಗ್ರಾಮವಾದ ಕೂಡ್ಲಿನಲ್ಲಿ ಇಂತಹ ಶಿಬಿರ ಹಮ್ಮಿಕೊಳ್ಳುವ ಮೂಲಕ ಉದಯೋನ್ಮಖ ಕಲಾವಿದರನ್ನು ರೂಪುಗೊಳಿಸುವ ಕೆಲಸ ನಡೆಯಬೇಕು ಎಂದು ಹೇಳಿದರು. ಮೇಘರಂಜನ ಚಂದ್ರಗಿರಿಯ ನಿರ್ಧೇಶಕ ಪುರುಷೋತ್ತಮಕೊಪ್ಪಲ್ ಅಧ್ಯಕ್ಷತೆ ವಹಿಸಿ ಮತನಡಿ, ಶಿಬಿರಗಳ ಮೂಲಕ ಮಕ್ಕಳ ಕಲಾಪ್ರತಿಭೆ ಅನಾವರಣಗೊಳಿಸಲು ಹಾಗೂ ಎಳೆಯ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುವಲ್ಲಿ ಮೇಘರಂಜನ ಚಂದ್ರಗಿರಿ ಯತ್ನಿಸುತ್ತಿರುವುದಾಗಿ ತಿಳಿಸಿದರು. ಖ್ಯಾತಹಾಡುಗಾರ ಕಿಶೋರ್ ಕುಮಾರ್ ಪೆರ್ಲ, ಪ್ರಭಾಕರ್, ಸವಿತಾ ಟೀಚರ್ ಕೂಡ್ಲು ಉಪಸ್ಥಿತರಿದ್ದರು. ಕಿರಣ್‍ಪ್ರಸಾದ್ ಕೂಡ್ಲು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಕೂಡ್ಲು ಪ್ರೌಢಶಾಲೆಯ ಆಯ್ದಮಕ್ಕಳಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಖ್ಯಾತ ಹಾಡುಗಾರಕಿಶೋರ್‍ಕುಮಾರ್ ಪೆರ್ಲ ಕಲಿಸಿಕೊಟ್ಟರು. ಪ್ರಭಾಕರ್, ಸವಿತಾ ಟೀಚರ್ ಉಷ ಟೀಚರ್ ಸಹಕರಿಸಿದರು.