HEALTH TIPS

'ಮೊಬೈಲ್' ಚಟ ಅಂಟಿಸಿಕೊಂಡವರಿಗೆ ತಪ್ಪಿದ್ದಲ್ಲ ಈ ಅಪಾಯ...!

 ದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ ಅಪಾಯ ತಪ್ಪಿದ್ದಲ್ಲ. ಅವರಲ್ಲಿ ಕಾರ್ಡಿಯೋ-ವಿಷಕಾರಿ ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ.

ಶೇ.70 ರಷ್ಟು ಯುವಕ – ಯುವತಿಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಚಿಕ್ಕ ಚಿಕ್ಕ ವಿಷಯಗಳನ್ನು ಹ್ಯಾಂಡಲ್ ಮಾಡಲಾಗದೆ ಒದ್ದಾಡೋದು, ಕ್ಷುಲ್ಲಕ ಕಾರಣಕ್ಕೆ ಜಗಳ ಇವೆಲ್ಲವೂ ಒತ್ತಡದ ಲಕ್ಷಣಗಳು. ಅಷ್ಟೇ ಅಲ್ಲ ಆತಂಕ ಕೂಡ ಹೆಚ್ಚಾಗಿರುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಕೂಡ ಒತ್ತಡ ಹೆಚ್ಚಾಗಲು ಒಂದು ಪ್ರಮುಖ ಕಾರಣ. ಸ್ಮಾರ್ಟ್ ಫೋನ್ ಗಳು ಹಾರ್ಮೋನ್ಸ್ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಆದ್ರೆ ಜಡವಾದ ಜೀವನ ಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ ಶುರುವಾಗುತ್ತದೆ.

ಒಂದೇ ಪೊಸಿಶನ್ ನಲ್ಲಿ ಬಹಳ ಹೊತ್ತು ಕೂರುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ತೂಕ ಹೆಚ್ಚಾಗುವುದರ ಜೊತೆಗೆ ಯುವತಿಯರಲ್ಲಿ ಪಾಲಿಸಿಸ್ಟಿಕ್ ಓವರಿಯನ್ ರೋಗ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಒಂದೇ ಚಟುವಟಿಕೆಗೆ ಮೆದುಳನ್ನು ಮಿತಿಮೀರಿ ಬಳಸುವುದರಿಂದ ದೇಹದ ಉಳಿದ ಅಂಗಾಂಗಗಳ ಆಯಕ್ಟಿವಿಟಿ ಕುಂಠಿತವಾಗಬಹುದು.

ಇದರಿಂದ ಹಾರ್ಮೋನುಗಳಲ್ಲೂ ವ್ಯತ್ಯಾಸವಾಗಿ ನಿದ್ರಾಹೀನತೆ ಕಾಣಿಸಿಕೊಳ್ಳುತ್ತದೆ. ಒತ್ತಡದ ನಡುವೆ ಹಾರ್ಮೋನುಗಳು ದೇಹವನ್ನು ರಕ್ಷಿಸಲು ಶ್ರಮಿಸುವುದರಿಂದ ಇಂಬ್ಯಾಲೆನ್ಸ್ ಉಂಟಾಗುತ್ತದೆ. ಹಾಗಾಗಿ ಮೊಬೈಲ್ ಚಟದಿಂದ ದೀರ್ಘಕಾಲದ ಖಾಯಿಲೆ ನಿಮ್ಮನ್ನು ಆವರಿಸಿಕೊಳ್ಳಬಹುದು.

ಸಕ್ಕರೆ ಖಾಯಿಲೆ, ಫರ್ಟಿಲಿಟಿ ಸಮಸ್ಯೆ ಹಾಗೂ ಕಿಬ್ಬೊಟ್ಟೆಯ ಸ್ಥೂಲಕಾಯ ಬರುವ ಸಾಧ್ಯತೆ ಇದೆ. ದಿನಕ್ಕೆ 6-8 ಗಂಟೆಗೂ ಅಧಿಕ ಸಮಯ ಮೊಬೈಲ್ ಬಳಸುವುದು ಕೂಡ ಒಂದು ಖಾಯಿಲೆ. ಅತಿಯಾದ ಮೊಬೈಲ್ ಬಳಕೆ ಕೂಡ ಒಂದು ರೋಗ ಎನ್ನುತ್ತಾರೆ ವೈದ್ಯರು.

ಹಾಗಾಗಿ ಸದಾ ಫೋನ್ ನಲ್ಲಿ ಚಾಟಿಂಗ್, ಮೆಸೇಜ್ ಮಾಡುವ ಬದಲು ನೇರವಾಗಿ ಭೇಟಿ ಮಾಡಿ, ಚರ್ಚಿಸಿ ಅನ್ನೋದು ವೈದ್ಯರ ಸಲಹೆ. ಸಾಮಾಜಿಕ ತಾಣಗಳಲ್ಲಿ ಸ್ನೇಹಿತರಿಗೆ ಶುಭಾಶಯ ಸಂದೇಶ ಕಳಿಸುವ ಬದಲು ನೇರವಾಗಿ ಭೇಟಿಯಾಗಿ, ಅಥವಾ ಕರೆ ಮಾಡಿ. ಮೊಬೈಲ್ ಚೆಕ್ ಮಾಡಲು ಸಮಯ ನಿಗದಿಪಡಿಸಿಕೊಳ್ಳಿ, ಅಗತ್ಯವಿದ್ದಾಗ ಮಾತ್ರ ಸ್ಮಾರ್ಟ್ ಫೋನ್ ಬಳಸಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries