ಕಾಸರಗೋಡು: ಮಾನಸಿಕ ಅಸೌಖ್ಯ ಹೊಂದಿರುವ ವಿದ್ಯಾರ್ಥಿಗೆ ಸಲಿಂಗ ಕಿರುಕುಳ ನೀಡಿದ್ದ ಆರೋಪಿಪೊವ್ವಲ್ ನಿವಾಸಿ ಸಾದಿಕ್(24) ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಆದೂರು ಠಾಣೆ ಪೊಲಿಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.
ಚೆಂಗಳ ಪಂಚಾಯಿತಿ ವ್ಯಾಪ್ತಿಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ ಮಾನಸಿಕ ಅಸೌಖ್ಯ ಹೊಂದಿರುವ 20ರ ಹರೆಯದ ಯುವಕನಿಗೆ ಮಾದಕ ಪದಾರ್ಥ ನೀಡಿ ಕರೆದೊಯ್ದು, ಸಲಿಂಗ ಕಿರುಕುಳ ನೀಡಿದ್ದನು. ಶಾಲೆಗೆ ತೆರಳಲು ಬಸ್ಸಿಗಾಗಿ ಕಾದು ನಿಂತಿದ್ದ ಯುವಕನನ್ನು ಬೈಕಿನಲ್ಲಿ ಕರೆದೊಯ್ದು ಕಿರುಕುಳ ನೀಡಿದ್ದನು. ಆರು ತಿಂಗಳ ಹಿಂದೆ ಕಿರುಕುಳ ನೀಡಿದ್ದು, ನಂತರದ ಕೆಲವು ನಿರ್ದಿಷ್ಟ ದಿವಸಗಳಲ್ಲಿ ಆರೋಪಿ ಯುವಕನಿಗೆ ಕಿರುಕುಳ ನೀಡುತ್ತಾ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಆರೋಪಿ ಈ ಹಿಂದೆ ಎರಡು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.