HEALTH TIPS

ಧರ್ಮತ್ತಡ್ಕ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

                  ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದಕ್ಕಾಗಿ  ವಿದ್ಯಾರ್ಥಿ ಸಂಸತ್ ಚುನಾವಣೆ ಕಳೆದ ಗುರುವಾರ ನಡೆಸಲಾಯಿತು.

              ಚುನಾವಣೆ ಅಧಿಸೂಚನೆಯ ಮೂಲಕ ಆರಂಭವಾದ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರ ನಡೆದು ಬಳಿಕ ಚುನಾವಣೆಯ ದಿನ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಶಿಸ್ತುಬದ್ದವಾಗಿ ಸರತಿ ಸಾಲಿನಲ್ಲಿ ಬಂದು ತಮ್ಮ ಗುರುತು ತಿಳಿಸಿ ಮತ ಚಲಾಯಿಸಿದರು.


             ಚುನಾವಣಾ ವೀಕ್ಷಕರಾಗಿದ್ದ ಶಿಕ್ಷಕರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ನಂತರ  ಮತದಾನಕ್ಕೆ ಅವಕಾಶ ಮಾಡಕೊಡಲಾಯಿತು. ವಿದ್ಯಾರ್ಥಿಗಳು ಪ್ರತ್ಯೇಕ ಸರದಿಯಲ್ಲಿ ನಿಂತು ಶಾಲಾ ಗುರುತಿನ ಚೀಟಿ ಹಿಡಿದು ಮತದಾನದ ಹಕ್ಕು ಚಲಾಯಿಸಿದರು. 675 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಡಗೈ ತೋರುಬೆರಳಿಗೆ ಶಾಹಿ ಹಚ್ಚಿಸಿಕೊಂಡು ಮತದಾನ ಮಾಡಿದರು. ಶಾಲಾ ವಿದ್ಯಾರ್ಥಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಇವಿಯಂ ಮಾದರಿಯ ಯಂತ್ರವನ್ನು ಪರಿಚಯಿಸಲಾಗಿತ್ತು. ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ನೂತನ್ ಎಡಕ್ಕಾನ ಉಪನಾಯಕಿಯಾಗಿ 10ನೇ ತರಗತಿಯ ಡಾನಿಕಾ ಪಹಲ್ ಆಯ್ಕೆಯಾದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries