ತ್ರಿಶೂರ್: ವಲಪಾಡ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ(ಮಣಪ್ಪುರA ಪೈನಾನ್ಸ್) ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿ ಧನ್ಯಾ ೮ ಖಾತೆಗಳಿಗೆ ವಂಚಿಸಿದ ಹಣ ವರ್ಗಾವಣೆ ಮಾಡಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.
ಕಪ್ಪುಹಣವನ್ನು ವ್ಯವಹಾರ ನಡೆಸುವ ತಂಡದವರ ನೆರವಿನಿಂದ ಪತಿಯ ಎನ್‌ಆರ್‌ಐ ಖಾತೆಗಳಿಗೆ ಹಣ ವರ್ಗಾವಣೆಯಾಗಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ. ಪೋಲೀಸರು ಧನ್ಯಳ ಖಾತೆಯಲ್ಲಿದ್ದ ಹಣ ಹಾಗೂ ಆರೋಪಿ ಹಾಗೂ ಆತನ ಸಂಬAಧಿಕರ ಹೆಸರಿನಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆರಂಭಿಸಿದ್ದಾರೆ.
ಧನ್ಯ ಹೆಸರಲ್ಲಿ ಬರೋಬ್ಬರಿ ೫ ಖಾತೆಗಳು ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪೋಲೀಸರು ಅವರ ಕಳೆದ ನಾಲ್ಕು ಖಾತೆ ವಿವರ ಮತ್ತು ಇತರ ವಿವರಗಳನ್ನು ಪರಿಶೀಲಿಸಿದರು. ಧನ್ಯ ೫ ಖಾತೆಗಳಲ್ಲಿ ೧೯.೯೬ ಕೋಟಿ ರೂಪಾಯಿ ವಂಚನೆ ಮಾಡಿದ್ದಾಳೆ. ಆರೋಪಿಯನ್ನು ಇಂದು ವಿವರವಾಗಿ ವಿಚಾರಣೆ ನಡೆಸಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಸಾಲವಾಗಿ ಪರಿವರ್ತಿಸಿ ಹಣ ದೋಚಿದ್ದಾಳೆ.
ಐಷಾರಾಮಿ ಜೀವನಕ್ಕಾಗಿ ಮತ್ತು ಆನ್‌ಲೈನ್ ರಮ್ಮಿ ಆಡಲು ಆಕೆ ಕಳೆದ ಐದು ವರ್ಷ ಪಡೆದ ಹಣವನ್ನು ದುರುಪಯೋಗಮಾಡಿ ವಂಚಿಸಿರುವಳು ಎಂದು ಪೋಲೀಸರು ಕಂಡುಕೊAಡಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಧನ್ಯ ಮೋಹನ್ ನಿನ್ನೆ ಕೊಲ್ಲಂ ಪೋಲೀಸ್ ಠಾಣೆಗೆ ಬಂದು ಶರಣಾಗಿದ್ದಳು. ವೈದ್ಯಕೀಯ ಪರೀಕ್ಷೆಯ ನಂತರ ತ್ರಿಶೂರ್‌ಗೆ ಕರೆತರಲಾಯಿತು. ಪ್ರಾಥಮಿಕ ವಿಚಾರಣೆ ಬಳಿಕ ಪೋಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.