ಮಧೂರು: ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಇದರ 23ನೇ ವಾರ್ಷಿಕೋತ್ಸವ ಸಂದರ್ಭ ಕೂಡ್ಲು ದೇವಸ್ತಾನದ ನಿವೃತ್ತ ಅರ್ಚಕ ಶ್ರೀಪತಿ ಅಡಿಗ, ಕರ್ನಾಟಕ ಯಕ್ಷಗಾನ ಅಕಾಡಮಿಗೆ ಸದಸ್ಯ ಸತೀಶ್ ಅಡಪ ಸಂಕಬೈಲು ಹಾಗೂ ಚಾರ್ಟರ್ಡ್ ಅಕೌಂಟAಟ್ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕೇಂದ್ರದ ಸದಸ್ಯ ಲತೇಶ್ ಎಂ. ಪಿ ಯವರನ್ನು ಗಣ್ಯರ ಸಮಕ್ಷಮ ಅಭಿನಂದಿಸಿ ಗೌರವಿಸಲಾಯಿತು.