HEALTH TIPS

ಅಮೀಬಿಕ್ ಎನ್ಸೆಫಾಲಿಟಿಸ್ ಬಾಧಿಸಿದ್ದ ಮಗು ವಾರಗಳ ನಂತರ ಚೇತರಿಕೆ

                 ತ್ರಿಶೂರ್: ಕೇರಳದಲ್ಲಿ ಅಪರೂಪದ ಅಮೀಬಿಕ್ ಮೆದುಳು ಜ್ವರ (ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್) ಆತಂಕವನ್ನು ಹರಡುತ್ತಿರುವಾಗಲೇ ಕೊಚ್ಚಿಯಿಂದ ಸಮಾಧಾನಕರ ಸುದ್ದಿಯೊಂದು ಬಂದಿದೆ.

                    ಅಮೀಬಿಕ್ ಎನ್ಸೆಫಾಲಿಟಿಸ್‍ನಿಂದಾಗಿ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 12 ವರ್ಷದ ಬಾಲಕನ ಸ್ಥಿತಿ ಸುಧಾರಿಸುತ್ತಿದೆ. ಮಗುವಿನ ಸ್ಥಿತಿ ಸುಧಾರಿಸಿದ ನಂತರ ಐಸಿಯುನಿಂದ ಕೊಠಡಿಗೆ ಸ್ಥಳಾಂತರಿಸಲಾಯಿತು. ತ್ರಿಶೂರ್ ವೆಂಕಟ್ ಪಟೂರ್‍ನ 7 ನೇ ತರಗತಿ ವಿದ್ಯಾರ್ಥಿ ಅಮೀಬಿಕ್ ಎನ್ಸೆಫಾಲಿಟಿಸ್‍ನಿಂದ ಬಳಲುತ್ತಿದ್ದು, ಅಮೃತಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

                   ಕಳೆದ ಜೂನ್ 1 ರಂದು ಮಗು ಜ್ವರದ ಕಾರಣ ಪಾತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದಿತ್ತು. ನಂತರ 2ರಂದು ತ್ರಿಶೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಜ್ವರದ ಕಾರಣ ಮಗುವನ್ನು ಇಲ್ಲಿಂದ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಚಿಕಿತ್ಸೆ ನೀಡುವಾಗ, ಮಗುವಿನ ಸೆರೆಬ್ರೊಸ್ಪೈನಲ್ ದ್ರವದ ಮಾದರಿಯನ್ನು ಪುದುಚೇರಿಯ ಲ್ಯಾಬ್‍ಗೆ ಕಳುಹಿಸಲಾಗಿದ್ದು, ಮಗುವಿಗೆ ವರ್ಮಾಮೋಬಾ ವರ್ಮಿಫೆÇೀರಿಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ನಂತರ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್‍ನಲ್ಲಿ ದಾಖಲಿಸಲಾಗಿದೆ. ಮಗುವನ್ನು ಜೂನ್ 16 ರಂದು ಅಮೃತಾ ಆಸ್ಪತ್ರೆಗೆ ಕರೆತರಲಾಗಿತ್ತು ಸ್ಥಿತಿ ಚಿಂತಾಜನಕವಾಗಿತ್ತು. ಅಮೃತಾ ಆಸ್ಪತ್ರೆಗೆ ದಾಖಲಾದ ಮಗುವಿನ ಮಾದರಿಗಳನ್ನು ಅದೇ ಲ್ಯಾಬ್‍ಗೆ ಕಳುಹಿಸಲಾಗಿದ್ದು, ಫಲಿತಾಂಶವು ಸಕಾರಾತ್ಮಕವಾಗಿದೆ.

               ಒಂದು ವಾರದ ಚಿಕಿತ್ಸೆಯ ನಂತರ ಮಗುವಿನ ಸ್ಥಿತಿ ಸುಧಾರಿಸಿದ್ದು, ಎರಡು ವಾರಗಳ ಬಳಿಕ ಮಗು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡಲು ಪ್ರಾರಂಭಿಸಿತು. ಐಸಿಯುನಲ್ಲಿ ನಿಗಾದಲ್ಲಿದ್ದ ಮಗುವಿನ ಆರೋಗ್ಯ ಸ್ಥಿತಿ ತೃಪ್ತಿಕರವಾದ ಹಿನ್ನೆಲೆಯಲ್ಲಿ ನಿನ್ನೆ ಕೊಠಡಿಗೆ ವರ್ಗಾಯಿಸಲಾಗಿತ್ತು. ಸದ್ಯ ಮಗುವಿನ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದ್ದು, ವಾರದೊಳಗೆ ಸಂಪೂರ್ಣ ಗುಣಮುಖರಾಗುವ ನಿರೀಕ್ಷೆ ಇದೆ ಎಂದು ಅಮೃತಾ ಆಸ್ಪತ್ರೆಯ ಮಕ್ಕಳ ನರವಿಜ್ಞಾನ ವಿಭಾಗದ ಮುಖ್ಯಸ್ಥ ಕೆ.ಪಿ.ವಿನಯನ್ ತಿಳಿಸಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries