ತಿರುವನಂತಪುರಂ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಆಟಿಸಂ ಪೀಡಿತ ವಿದ್ಯಾರ್ಥಿನಿಯನ್ನು ಶಾಲೆಯಿಂದ ಹೊರಹಾಕಿದ ಪ್ರಾಂಶುಪಾಲರ ವಿರುದ್ಧ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
ಘಟನೆಯ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗ ಡಿಇಒಗೆ ಆದೇಶಿಸಿದೆ. ಶಾಲೆ ಮತ್ತು ಪ್ರಾಂಶುಪಾಲರು ತಮ್ಮ ಶಿಸ್ತಿನಲ್ಲಿ ಗಂಭೀರವಾಗಿ ವಿಫಲರಾಗಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ಗಮನಿಸಿದೆ.
ಶಿಸ್ತು ಉಲ್ಲಂಘಿಸಿರುವ ಬಗ್ಗೆ ದೂರುಬಂದ ಕೂಡಲೇ ಮಗುವಿನ ಟಿಸಿ ಪಡೆಯುವಂತೆ ಶಾಲೆಯ ಅಧಿಕಾರಿಗಳು ಮಗುವಿನ ಪೋಷಕರಿಗೆ ಸೂಚಿಸಿದ್ದಾರೆ. ಮೂರು ತಿಂಗಳೊಳಗೆ ಶಾಲೆ ಬದಲಾಯಿಸಲಾಗುವುದೆಂದು ಮಗುವಿನ ತಾಯಿ ಹೇಳಿದರೂ ಶಾಲೆಯ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಒಂದು ವಾರ ಮಾತ್ರ ಅವಕಾಶ ನೀಡಲಾಗಿತ್ತು.
ಈ ಮಗು ಶಾಲೆಯಲ್ಲೇ ಉಳಿದರೆ ಬೇರೆ ಮಕ್ಕಳು ಶಾಲೆಗೆ ಬರಲೊಪ್ಪುವುದಿಲ್ಲ ಎಂದು ಪ್ರಾಂಶುಪಾಲರು ಹೇಳಿರುವುದನ್ನು ಮಾನವ ಹಕ್ಕುಗಳ ಆಯೋಗ ಪತ್ತೆ ಹಚ್ಚಿದೆ.