HEALTH TIPS

ಪುರುಷರು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುವುದೇಕೆ..? ಹೊಸ ಅಧ್ಯಯನ ಹೇಳೋದೇನು?

 ನಾವು ಬಾತ್‌ರೂಮ್‌ ಬಳಸುವಾಗ ಹೆಚ್ಚು ಹೊತ್ತು ಒಳಗೆ ಕಳೆಯುತ್ತೇವೆ, ಇದು ಎಲ್ಲರ ಕಥೆ. ಆದ್ರೆ ನಾವು ಹೆಚ್ಚು ಹೊತ್ತು ಬಾತ್‌ರೂಮ್‌ನಲ್ಲಿ ಕಳೆಯುತ್ತಿದ್ದೇವೆ ಎಂದು ಅನಿಸುವುದಿಲ್ಲ. ಆದ್ರೆ ನಾವು ಹೆಚ್ಚು ಸಮಯ ಕಳೆದಿರುತ್ತೇವೆ. ಮತ್ತೆ ಕೆಲವರು ಮೊಬೈಲ್ ತೆಗೆದುಕೊಂಡು ಹೋದರೆ ಗಂಟೆಗಳ ಕಾಲ ಒಳಗೆ ಕಳೆಯುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ ಎನಿಸಿದರು ಇದರಲ್ಲಿ ಹಲವು ವಿಚಾರಗಳು ಅಡಗಿದೆ ಎಂಬುದು ನಿಮಗೆ ಗೊತ್ತಿದ್ಯಾ?

ಮೊಬೈಲ್ ಕೈನಲ್ಲಿ ಇದ್ದರೆ ಹಲವರು ಬಾತ್‌ರೂಮ್‌ನಿಂದ ಹೊರಗೆ ಬರುವುದಿಲ್ಲ. ಅಲ್ಲಿಯೇ ಮೊಬೈಲ್ ಬಳಸಿಕೊಂಡು ಇರುತ್ತಾರೆ. ಮತ್ತೆ ಕೆಲವರು ಸಿಗರೇಟ್ ಸೇದುವ ಅಭ್ಯಾಸವನ್ನೂ ಇಟ್ಟುಕೊಂಡಿರುತ್ತಾರೆ. ಒಳಗೆ ಹೋದವರು ಗಂಟೆಗಳ ಕಾಲ ಒಳಗೆ ಸಿಲುಕಿದವರಂತೆ ಕಾಲ ಕಳೆಯುತ್ತಾರೆ.

ಈಗ ಹೊಸದೊಂದು ಅಧ್ಯಯನ ಹೊರಬಿದ್ದಿದ್ದು, ಈ ಅಧ್ಯಯನದ ಪ್ರಕಾರ ಒಬ್ಬ ಸಾಮಾನ್ಯ ವ್ಯಕ್ತಿ ವಾರಕ್ಕೆ ಒಂದು ಗಂಟೆ ಐವತ್ತನಾಲ್ಕು ನಿಮಿಷಗಳ ಕಾಲ ಅಥವಾ ತಿಂಗಳಿಗೆ ಸುಮಾರು ಒಂದು ದಿನ ಇಡಿಯಾಗಿ ಆತ ಬಾತ್‌ರೂಮ್‌ನಲ್ಲೇ ಕಳೆಯುತ್ತಾನಂತೆ.

ಸ್ನಾನ ಮಾಡುವುದು, ಬಟ್ಟೆ ತೊಳೆಯುವುದು ಸೇರಿ ನಿತ್ಯ ಕರ್ಮಗಳ ಮಾಡುವ ಈ ಬಾತ್‌ರೂಮ್‌ನಲ್ಲಿ ವ್ಯಕ್ತಿ ಅದನ್ನು ವಿಶ್ರಾಂತಿ ಗೃಹವಾಗಿ ಬದಲಾಯಿಸಿದ್ದಾನಂತೆ. ಹಾಗಾದ್ರೆ ಒಬ್ಬ ವ್ಯಕ್ತಿ ಈ ರೀತಿ ಯಾಕೆ ಮಾಡುತ್ತಾನೆ? ಇದರ ಹಿಂದಿರುವ ಕಾರಣವೇನು ಎಂಬುದನ್ನು ಈ ಅಧ್ಯಯನದ ಮೂಲಕ ಪತ್ತೆ ಮಾಡಲಾಗಿದೆ.

ಜನರು ಬಾತ್‌ರೂಮ್‌ನಲ್ಲಿ ಯಾಕೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಪತ್ತೆ ಮಾಡಲು 2000 ಜನರನ್ನು ಅಧ್ಯಯನಕ್ಕಾಗಿ ಬಳಸಿಕೊಂಡಿದ್ದರು. ಅವರಲ್ಲಿ ಶೇ 43ರಷ್ಟು ಮಂದಿ ಶಾಂತಿ ಪಡೆಯಲು ಸ್ವಲ್ಪ ವಿಶ್ರಾಂತಿಗಾಗಿ ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯಲು ಮುಂದಾಗುತ್ತಾರಂತೆ. ಇನ್ನು 13ರಷ್ಟು ಮಂದಿ ತಮ್ಮ ಪತಿ ಅಥವಾ ಪತ್ನಿಯಿಂದ ಕೆಲ ಕಾಲ ದೂರಾಗಿ ನೆಮ್ಮದಿ ಪಡೆಯಲು ಈ ರೀತಿ ಹೆಚ್ಚು ಸಮಯ ಕಳೆಯಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.

ಇದರಲ್ಲಿ ಬಾತ್‌ರೂಮ್‌ಗೆ ತೆರಳಿ ಹೆಚ್ಚು ಸಮಯ ಕಳೆಯುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸಮಯ ಕಳೆಯುತ್ತಾರಂತೆ. ವಾರದಲ್ಲಿ ಪುರುಷರು 2 ಗಂಟೆ ಮತ್ತು 20 ನಿಮಿಷ ಹಾಗೂ ಮಹಿಳೆಯರು 1 ಗಂಟೆ 42 ನಿಮಿಷಗಳ ಕಾಲ ಬಾತ್‌ರೂಮ್‌ನಲ್ಲಿ ಕಳೆಯುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಅಚ್ಚರಿ ವಿಚಾರ ಎಂದರೆ ಈ ಅಧ್ಯಯನದಲ್ಲಿ ಭಾಗಿಯಾದ ಬಹುತೇಕರು ಬಾತ್‌ರೂಮ್‌ನಲ್ಲಿ ಹೆಚ್ಚು ಕಾಲ ಕಳೆಯುವುದು ಒತ್ತಡ ನಿವಾರಣೆಯಾಗುತ್ತದೆ ಎಂದಿದ್ದಾರೆ. ಇದು ಸಕಾರಾತ್ಮಕ ಉತ್ತರ ಎಂದು ಭಾವಿಸಲಾಗಿದೆ. ಇತ್ತ ಬಾತ್‌ರೂಮ್‌ಗೆ ಪುರುಷರು ಹಾಗು ಮಹಿಳೆಯರು ಮೊಬೈಲ್ ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ಜನರು ಮೊಬೈಲ್ ಏಕೆ ತೆಗೆದುಕೊಂಡು ಹೋಗುತ್ತಾರೆ ಎಂಬುದನ್ನೂ ಅಧ್ಯಯನ ಮಾಡಲಾಗಿದೆ. ಜೊತೆಗೆ ಬಾತ್‌ರೂಮ್‌ಗೆ ಮೊಬೈಲ್‌ ತೆಗೆದುಕೊಂಡು ಹೋದರೆ ಏನಾಗುತ್ತದೆ ಎಂಬುದನ್ನು ಸಹ ವಿವರಿಸಲಾಗಿತ್ತು.

ಬಾತ್‌ರೂಮ್‌ಗೆ ಮೊಬೈಲ್ ತೆಗೆದುಕೊಂಡು ಹೋಗುವುದರಿಂದ ಹತ್ತು ಹಲವು ಕಾಯಿಲೆಗಳಿಗೆ ಒಳಗಾಗುತ್ತಾರೆ ಎಂಬುದು ಸಹ ಅಧ್ಯಯನದಲ್ಲಿ ತಿಳಿದುಬಂದಿತ್ತು. ಸ್ಯಾನ್ ಫ್ರಾನ್ಸಿಸ್ಕೋದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ ಸೌರಭ್ ಸೇಥಿ ಅವರು ಟಾಯ್ಲೆಟ್‌ನಲ್ಲಿ ಸೆಲ್ ಫೋನ್ ಬಳಸುವುದರಿಂದ ನೀವು ಶೌಚಾಲಯದಲ್ಲಿ ಕಳೆಯುವ ಸಮಯವನ್ನು ಹೆಚ್ಚಿಸುತ್ತದೆ ಎಂದಿದ್ದರು. ಅಲ್ಲದೆ, ಇದು ನಿಮ್ಮ ಗುದನಾಳ ಮತ್ತು ಗುದದ್ವಾರದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ಗುದದ ಬಿರುಕುಗಳು ಮತ್ತು ಗುದನಾಳದ ಹಿಗ್ಗುವಿಕೆಗೆ ಕಾರಣವಾಗಬಹುದು ಎಂದು ಕಂಡುಕೊಂಡಿದ್ದರು. 2022ರಲ್ಲಿ, ಕೆಲವು ವಿಜ್ಞಾನಿಗಳು 'ಟಾಯ್ಲೆಟ್ ಪ್ಲಮ್' ಅನ್ನು ಉಲ್ಲೇಖಿಸಿದ್ದಾರೆ. ಅಂದರೆ ಒಬ್ಬರು ಫ್ಲಶ್ ಮಾಡಿದಾಗ, ಟಾಯ್ಲೆಟ್‌ನಲ್ಲಿರುವ ಅದೃಶ್ಯ ಸೂಕ್ಷ್ಮಾಣುಗಳ ಗ್ರಹಣಾಂಗಗಳು, ಹನಿಗಳು ಮತ್ತು ಕಣಗಳಾಗಿ ಸಿಡಿಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries