ಕಾಸರಗೋಡು: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸ್ಥಳೀಯಾಡಳಿತ ಸಂಸ್ಥೆಗಳು, ಕುಟುಂಬಶ್ರೀ, ಹಸಿರು ಕೇರಳ ಮಿಷನ್, ಶುಚಿತ್ವ ಮಿಷನ್, ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಜುಲೈ 14 ರಂದು ಬೃಹತ್ ಸಾರ್ವಜನಿಕ ಶುಚಿತ್ವ ಮತ್ತು ಆರೋಗ್ಯ ಅಭಿಯಾನವನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡುವ ಮೂಲಕ ಶುಚಿತ್ವದ ಬಗ್ಗೆ ತಪಾಸಣೆ ನಡೆಸಿ ಸೂಚನೆ ನೀಡಲಿದ್ದರೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ನಿರ್ಣಯದಂತೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ತ್ಯಾಜ್ಯಮುಕ್ತಂ ನವಕೇರಳ ಜಿಲ್ಲಾ ಪ್ರಚಾರ ಸಚಿವಾಲಯದ ಜಿಲ್ಲಾ, ಬ್ಲಾಕ್ ಅಧಿಕಾರಿಗಳು ಮತ್ತು ನಗರಸಭೆ. ವಿವಿಧ ಮಿಷನ್‍ಗಳ ಕಾರ್ಯಾಗಾರ ಮತ್ತು ಆನ್‍ಲೈನ್ ಸಭೆಯ ಮೂಲಕ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಎಲ್ಲಾ ಶಾಲೆಗಳಿಗೆ ಸ್ವಚ್ಛತೆಯ ಸಂದೇಶ ತಲುಪಿಸಲು ಕ್ರಮ ಕೈಗೊಳ್ಳಲಾಯಿತು. ಜು.14ರಂದು ತಮ್ಮ ಮನೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಸಭೆಯ ಮೂಲಕ ತಿಳಿಸಲಾಗಿದ್ದು, ಎನ್ನೆಸ್ಸೆಸ್, ಎಸ್‍ಪಿಸಿ ಹಾಗೂ ಎಸಿಸಿ ತಂಡದ ಸದಸ್ಯರಿಗೆ ಜಿಲ್ಲಾ ಸಂಯೋಜಕರ ಮೂಲಕ ಸೂಚನೆ ನೀಡಲಾಗಿದೆ. ವಿವಿಧ ಇಲಾಖೆಗಳು
ಜಿಲ್ಲಾ ಅಭಿವೃದ್ಧಿ ಸಮಿತಿ, ಜಿಲ್ಲಾ ಯೋಜನಾ ಸಮಿತಿ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ಸ್ವಚ್ಛತೆ ಕೈಗೊಳ್ಳುವಂತೆ ನೋಟಿಸ್ ಜಾರಿ ಮಾಡಲು ಜಿಲ್ಲಾ ಯೋಜನಾಧಿಕಾರಿಗೆ ಜವಾಬ್ದರಿ ವಹಿಸಿಕೊಡಲಾಯಿತು. ಜುಲೈ 14 ರಂದು ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರತಿ ಇಲಾಖೆಯ ಕೆಳಮಟ್ಟದ ನೌಕರರಿಗೆ ಸೂಚನೆ ನೀಡಲಾಯಿತು.