ಗೃಹಿಣಿಯರಿಗೆ ಅಡುಗೆ ಮನೆಯಲ್ಲಿ ಎಲ್ಲ ವಸ್ತುಗಳು ಸರಿಯಾಗಿದ್ದರೆ ಮಾತ್ರ ಅಂದಿನ ಕೆಲಸ ಬೇಗ ಮುಗಿಯುತ್ತೆ, ಅದ್ರಲ್ಲೂ ನಿತ್ಯ ಅಡುಗೆ ಮಾಡಲು ಬಳಸುವ ವಸ್ತುಗಳಂತು ಸರಿಯಾದ ರೀತಿ ಇರಬೇಕು. ಯಾವುದಾದರು ಒಂದು ವಸ್ತು ಇಲ್ಲದಿದ್ದರೆ ಅಥವಾ ದುರಸ್ಥಿಯಾದರೆ ಇಡೀ ದಿನ ಸಂಕಷ್ಟದಲ್ಲಿ ಕಳೆಯಬೇಕಾಗುತ್ತದೆ. ಇಂತಹ ವಸ್ತುಗಳಲ್ಲಿ ಮಿಕ್ಸಿ ಕೂಡ ಒಂದು.
ಮಿಕ್ಸಿ ಸರಿಯಾಗಿದ್ದರೆ ಗೃಹಿಣಿಯರ ಕೆಲಸ ಅರ್ಧ ಕಂಪ್ಲೀಟ್ ಆಗಿಬಿಡುತ್ತೆ. ಆದ್ರೆ ಕೆಲವೊಂದು ಬಾರಿ ಈ ಮಿಕ್ಸಿ ಸರಿಯಾದ ಸಮಯಕ್ಕೆ ಕೈ ಕೊಡುತ್ತೆ. ಇದ್ದಕ್ಕಿದ್ದಂತೆ ಬಂದ್ ಆಗುವುದು. ಜಾರ್ ಜಾಮ್ ಆಗುರುವುದು, ಸ್ವಿಚ್ ಆನ್ ಆಗಿಯೇ ಇದ್ದರೂ ವಿದ್ಯುತ್ ಪಾಸ್ ಆಗದೆ ಇರುವುದು ಹೀಗೆ ಒಂದಲ್ಲಾ ಇಂದು ಸಮಸ್ಯೆಗೆ ಒಳಗಾಗುತ್ತದೆ.
ಅಡುಗೆ ಕೆಲಸಕ್ಕೆ ಈ ಮಿಕ್ಸಿ ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತಿದೆ. ಎಲ್ಲಾ ಕೆಲಸದಲ್ಲೂ ಇದು ಮುಖ್ಯ, ಆದ್ರೆ ಈ ಮಿಕ್ಸಿ ಕೈಕೊಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಆದರೆ ಮಿಕ್ಸಿ ಯಾಕೆ ಹಾಳಾಗುತ್ತೆ ಅನ್ನೋದು ನಿಮಗೆ ಗೊತ್ತಾ? ಮಿಕ್ಸಿಯನ್ನ ಸರಿಯಾಗಿ ನಿರ್ವಹಣೆ ಮಾಡದೆ ಇದ್ದರೆ ಸಮಸ್ಯೆಗೆ ದಾರಿಯಾಗುತ್ತದೆ. ಹಾಗಾದ್ರೆ ಮಿಕ್ಸಿ ಹಾಳಾಗದಂತೆ ನಿರ್ವಹಣೆ ಮಾಡೋದು ಹೇಗೆ? ಜೊತೆಗೆ ಈ ರೀತಿ ಮಾಡಿದ್ರೆ ಮಿಕ್ಸಿ ಒಂದು ಬಾರಿಯೂ ಹಾಳಾಗಲ್ಲ.
ಮಿಕ್ಸಿ ಯಾವಾಗಲು ಸ್ವಚ್ಛಗೊಳಿಸಿ
ಮಿಕ್ಸಿ ನಿತ್ಯ ಬಳಸುವುದರಿಂದ ಕೊಳೆ, ಕಲೆ ಆಗುವುದು ಸಾಮಾನ್ಯ, ಅದರಲ್ಲೂ ಮಸಾಲೆ ಪದಾರ್ಥಗಳು, ಎಣ್ಣೆ ಜಿಡ್ಡಿನ ಕಾರಣದಿಂದಾಗಿ ಕಪ್ಪು ಕಲೆಗಳು ಮೂಡಿರುವುದನ್ನು ನಾವು ನೋಡಿರುತ್ತೇವೆ, ಈ ಜಿಡ್ಡು ಹೆಚ್ಚಾಗಿ ಮಿಕ್ಸಿಯ ಒಳಗೆ ಹಾನಿಯಾಗಲು ಕಾರಣವಾಗುತ್ತದೆ. ಹಾಗಾದ್ರೆ ಮಿಕ್ಸಿಯನ್ನ ಸ್ವಚ್ಛ ಮಾಡೋದು ಹೇಗೆ?
ಉಪ್ಪು ಮತ್ತು ವಿಮ್
ಮಿಕ್ಸಿಗೆ ಜಾರ್ ಇಡುವ ಸ್ಥಳ ಯಾವಾಗಲು ಮಾಸಾಲೆ, ನೀರು, ಕೊಳೆಗಳಿಂದ ತುಂಬಿರುತ್ತೆ ಇಲ್ಲಿಂದ ಮಿಕ್ಸಿ ಒಳಗೂ ಈ ಅಂಶ ಹೋಗುತ್ತದೆ. ಹೀಗಾಗಿ ಕೆಲವೊಮ್ಮೆ ಮಿಕ್ಸಿ ಸ್ಟಕ್ ಆಗುತ್ತದೆ. ಹೀಗಾಗಿ ಇದನ್ನು ಸರಿ ಮಾಡಲು ಉಪ್ಪು ಹಾಗೂ ವಿಮ್ ಜೆಲ್ ಇದ್ದರೆ ಸಾಕು. ಮೊದಲು ಉಪ್ಪನ್ನು ಮಿಕ್ಸಿ ಮೇಲೆ ಹಾಕಿ ಬಳಿಕ ವಿಮ್ ಜೆಲ್ ಅಥವಾ ಯಾವುದಾದರು ಜೆಲ್ ಹಾಕಿ ಕೈಯಲ್ಲಿ ನೀರು ಚಿಮುಕಿಸಿ ಒಂದು ಬ್ರಷ್‌ನಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಬಳಿಕ ಪಾತ್ರ ಉಜ್ಜುವ ಸ್ಕ್ರಬ್‌ಗೆ ಪೇಸ್ಟ್ ಹಾಕಿಕೊಂಡು ಇಡೀ ಮಿಕ್ಸಿಯನ್ನು ಉಜ್ಜಿಕೊಂಡು ಒಂದು ಶುದ್ದ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಕೊಳ್ಳಿ. ಹೀಗೆ ಮಾಡೋದ್ರಿಂದ ಎಂತಹ ಕಠಣ ಕಲೆ ಇದ್ದರೂ ಹೋಗುತ್ತದೆ. ಅಲ್ಲದೆ ಮಿಕ್ಸಿ ಎಂದಿಗೂ ಹಾಳಾಗುವುದಿಲ್ಲ. ಈ ರೀತಿ ತಿಂಗಳಿಗೆ ಎರಡು ಮೂರು ಬಾರಿ ಮಾಡುತ್ತಿದ್ದರೆ ನಿಮ್ಮ ಮಿಕ್ಸಿ ಎಂದಿಗೂ ಹಾಳಾಗುವುದೇ ಇಲ್ಲ.
ಮಿಕ್ಸಿ ಜಾರ್ ಸ್ಟಕ್ ಆದರೆ
ಇನ್ನು ಹಲವರ ಸಮಸ್ಯೆ ಏನೆಂದರೆ ಈ ಮಿಕ್ಸಿ ಜಾರ್‌ನ ಬ್ಲೇಡ್‌ಗಳು ತಿರಗದೆ ಸ್ಟಕ್ ಆಗುವುದು. ಹಲವು ಬಾರಿ ಈ ರೀತಿ ಆಗಲಿದೆ. ಹೀಗಾಗಿ ಈ ಜಾರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬಿಸಿ ಮಾಡಿದ ಎಣ್ಣೆ ಹಾಕಿ. ಬಳಿಕ ಜಾರ್ ಅನ್ನು ಒಲೆಯಲ್ಲಿ ಸ್ವಲ್ಪ ಬಿಸಿಗೆ ಹಿಡಿಯಿರಿ. ಜಾರ್‌ನ ಹಿಂಬದಿಯಲ್ಲೂ ಎಣ್ಣೆ ಹಾಕಿ ಬಿಸಿ ಮಾಡಿ. ಹಿಂದೆ ಪ್ಲಾಸ್ಟಿಕ್ ಇರುವುದರಿಂದ ಬಿಸಿ ಮಾಡುವಾಗ ಎಚ್ಚರ ವಹಿಸಿ. ಉಗುರು ಬೆಚ್ಚಗೆ ಆಗುವಷ್ಟು ಹೀಟ್ ಮಾಡಿದರೆ ಸಾಕಾಗುತ್ತದೆ. ಬಳಿಕ ಸ್ಟಕ್ ಆಗಿರುವ ಜಾರ್‌ನ ಬ್ಲೇಡ್ ಎಂದಿನಂತೆ ಕೆಲಸ ಮಾಡುತ್ತದೆ.