ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತನ್ನ ಬಜೆಟ್ ಭಾಷಣದಲ್ಲಿ ಮಕ್ಕಳಿಗಾಗಿ ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದೊಂದಿಗೆ 'ಎನ್‌ಪಿಎಸ್ ವಾತ್ಸಲ್ಯ' ಯೋಜನೆಯನ್ನು ಪ್ರಕಟಿಸಿದರು.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತನ್ನ ಬಜೆಟ್ ಭಾಷಣದಲ್ಲಿ ಮಕ್ಕಳಿಗಾಗಿ ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದೊಂದಿಗೆ 'ಎನ್‌ಪಿಎಸ್ ವಾತ್ಸಲ್ಯ' ಯೋಜನೆಯನ್ನು ಪ್ರಕಟಿಸಿದರು.
ಹಾಲಿ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನಪಿಎಸ್)ಯ ರೂಪಾಂತರವಾಗಿರುವ ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಮಕ್ಕಳು ವಯಸ್ಕರಾದಾಗ ಇದನ್ನು ಎನ್‌ಪಿಎಸ್‌ಯೇತರ ಯೋಜನೆಯನ್ನಾಗಿ ಅಥವಾ ದೀರ್ಘಾವಧಿಯ ನಿಯಮಿತ ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಯನ್ನಾಗಿ ಸುಲಭವಾಗಿ ಪರಿವರ್ತಿಸಿಕೊಳ್ಳಬಹುದು ಎಂದು ಸೀತಾರಾಮನ್ ತಿಳಿಸಿದರು.
ಎನ್‌ಪಿಎಸ್ ವಾತ್ಸಲ್ಯ ಭಾರತೀಯ ಕುಟುಂಬಗಳಲ್ಲಿ ಆರಂಭಿಕ ಉಳಿತಾಯಗಳು ಮತ್ತು ಹೂಡಿಕೆ ಅಭ್ಯಾಸಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆರಂಭದ ಹಂತದಲ್ಲಿ ತಮ್ಮ ಮಕ್ಕಳಿಗಾಗಿ ನಿವೃತ್ತಿ ಯೋಜನೆಯನ್ನು ಆರಂಭಿಸಲು ಪೋಷಕರಿಗೆ ಅವಕಾಶವನ್ನು ಒದಗಿಸುವ ಮೂಲಕ ಈ ಯೋಜನೆಯು ಯುವಪೀಳಿಗೆಗೆ ಹೆಚ್ಚು ಆರ್ಥಿಕವಾಗಿ ಸುಭದ್ರ ಭವಿಷ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.