ಕುಂಬಳೆ: ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಕುಂಬಳೆ ಘಟಕದ ನೇತೃತ್ವದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ನುಡಿನಮನ ನಿನ್ನೆ ದರ್ಭಾರ್ ಕಟ್ಟೆ (ಮುಂಡಪಳ್ಳ ) ಶ್ರೀ ರಾಜರಾಜೇಶ್ವರೀ ಕ್ಷೇತ್ರ ಪರಿಸರದಲ್ಲಿ ನಡೆಯಿತು.
ಸಮಾಜಸೇವಕ ಧಾರ್ಮಿಕ ಮುಂದಾಳು ಮಡ್ವ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ, ಹವ್ಯಾಸಿ ಯಕ್ಷಗಾನ ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್, ಕಲಾವಿದ, ಯಕ್ಷಗುರು ಶಿವಶಂಕರ ಭಟ್ ದಿವಾಣ ಮತ್ತು ಶ್ರೀ ವೈಡಿ ರಾಘವೇಂದ್ರ ನಾಯಕ್ ನುಡಿನಮನ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಿದರು. ಪೃಥ್ವ್ವಿರಾಜ್ ಜೆ ಶೆಟ್ಟಿ ಸ್ವಾಗತಿಸಿ, ಅವಿನಾಶ್ ಕಾರಂತ ಪಾಡಿ ವಂದಿಸಿದರು.