ಕೊಲಂಬೊ: ಶ್ರೀಲಂಕಾದ ಹಾಲಿ ಅಧ್ಯಕ್ಷರಾದ ರಾನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷೀಯ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ ಎಂದು ಅವರ ಆಪ್ತರು ಭಾನುವಾರ ತಿಳಿಸಿದ್ದಾರೆ.
ಕೊಲಂಬೊ: ಶ್ರೀಲಂಕಾದ ಹಾಲಿ ಅಧ್ಯಕ್ಷರಾದ ರಾನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷೀಯ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ ಎಂದು ಅವರ ಆಪ್ತರು ಭಾನುವಾರ ತಿಳಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯು ಖಂಡಿತವಾಗಿಯೂ ನಡೆಯಲಿದೆ ಮತ್ತು ವಿಕ್ರಮಸಿಂಘೆ ಅವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಯುನೈಟೆಡ್ ನ್ಯಾಷನಲ್ ಪಾರ್ಟಿಯ ಉಪಾಧ್ಯಕ್ಷರಾದ ರುವಾನ್ ವಿಜೆವರ್ಧನೆ ಅವರು ಖಚಿತಪಡಿಸಿದ್ದಾರೆ ಎಂದು 'ನ್ಯೂಸ್ ಫಸ್ಟ್' ವರದಿ ಮಾಡಿದೆ.
'ಶ್ರೀಲಂಕಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಬಲ್ಲ ಸಾಮರ್ಥ್ಯವುಳ್ಳ ಏಕೈಕ ನಾಯಕ ಎಂದರೆ ಅದು ವಿಕ್ರಮಸಿಂಘೆ. ತಮ್ಮ ಕೆಲಸದಿಂದ ಅವರು ಅದನ್ನು ಸಾಬೀತುಪಡಿಸಿದ್ದಾರೆ' ಎಂದು ರುವಾನ್ ಹೇಳಿದ್ದಾಗಿ ವರದಿಯಾಗಿದೆ. ವಿಕ್ರಮಸಿಂಘೆ ಅವರು 2022ರ ಜುಲೈನಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅಧ್ಯಕ್ಷೀಯ ಚುನಾವಣೆಯ ದಿನಾಂಕವನ್ನು ಈ ತಿಂಗಳ ಕೊನೆಯಲ್ಲಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಆರ್.ಎಂ.ಎ.ಎಲ್ ರತ್ನಾಯಕೆ ಅವರು ಹೇಳಿದ್ದಾರೆ. ಚುನಾವಣೆಯು ಸೆ.17 ಮತ್ತು ಅ.16ರೊಳಗಿನ ಅವಧಿಯಲ್ಲಿ ನಡೆಯಲಿದೆ ಎಂದು ಆಯೋಗವು ಮೇ ತಿಂಗಳಲ್ಲಿ ಹೇಳಿತ್ತು.