ಉಪ್ಪಳ: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಅಣಕು ಪಾರ್ಲಿಮೆಂಟ್ ಅಧಿವೇಶನ ಪೈವಳಿಕೆ ಕಾಯರ್‍ಕಟ್ಟೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ಮಾದಕ ವ್ಯಸನದಿಂದ ಉಂಟಾಗುವ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಆರೋಗ್ಯಪರವಾದ ದುಷ್ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಮಾದಕ ವಸ್ತುಗಳ ಉಪಯೋಗ ಹಾಗೂ ಅದರಿಂದುಂಟಾಗುವ ದುಷ್ಪರಿಣಾಮಗಳ ವಿರುದ್ಧ ಮಸೂದೆ ಮಂಡಿಸಿ ಅಂಗೀಕರಿಸಲಾಯಿತು. ಪ್ರಧಾನ ಮಂತ್ರಿ, ಸಚಿವರು, ಪ್ರತಿಪಕ್ಷ ನಾಯಕ, ಸಭಾಧ್ಯಕ್ಷ ಜವಾಬ್ದಾರಿಯನ್ನು ಶಾಲಾ ವಿದ್ಯಾರ್ಥಿಗಳೇ ಉತ್ತಮ ರೀತಿಯಲ್ಲಿ ನಿಭಾಯಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಹರೀಶ್ ಕುಮಾರ್ ಬಿ, ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.