ಕುಂಬಳೆ: ಪುತ್ತಿಗೆ ಪಂಚಾಯಿತಿ ಬಾಡೂರಿನಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲಾ ವಾಹನ ಕಡಿದಾದ ತಿರುವಿನಲ್ಲಿ ಆಳವಾದ ಕಂದಕಕ್ಕೆ ಮಗುಚಿಬಿದ್ದಿದೆ. ಚಾಲಕ ಹಾಗೂ ಇಬ್ಬರು ವಿದ್ಯಾರ್ತಿಗಳಿದ್ದು, ಇವರೆಲ್ಲರೂ, ಗಾಯಗಳಿಲ್ಲದೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಬಾಡೂರು ಸನಿಹದಿಂದ ಮಕ್ಕಳನ್ನು ಹತ್ತಿಸಿ, ಮುಂದಕ್ಕೆ ತೆರಳುತ್ತಿದ್ದಂತೆ ತಿರುವಿನಲ್ಲಿ ಬಸ್ ಪಲ್ಟಿಯಾಗಿತ್ತು. ತಕ್ಷಣ ಆಸುಪಾಸಿನವರು ಧಾವಿಸಿ, ಮಕ್ಕಳನ್ನು ಹಾಗೂ ಚಾಲಕನನ್ನು ರಕ್ಷಿಸಿದ್ದಾರೆ.