ಕಾಸರಗೋಡು: ಹಿಂದೂ ಸಂಸ್ಕಾರ ಹಾಗೂ ವೇದಗಳ ಬಗ್ಗೆ ಮಕ್ಕಳಿಗೆ ಬೋಧನೆ ನೀಡುವ ಮೂಲಕ ಭವಿಷ್ಯದಲ್ಲಿ ದೇಶದ ಪರಂಪರೆಯನ್ನು ಮುಂದಿನ ಪೀಳಿಗೆಗೆ ವಿಸ್ತರಿಸಲು ಸಆಧ್ಯ ಎಂಬುದಾಗಿ ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ.
ಅವರು ವಿಶ್ವ ಜ್ಞಾನ ಸಂಘ ಟ್ರಸ್ಟ್ ನೇತೃತ್ವದಲ್ಲಿ ವಿಶ್ವದಲ್ಲಿಯೇ ಮೊದಲಬಾರಿಗೆ ಕಾಸರಗೋಡು ಚೌಕಿ ಕಾವುಗೋಳಿ ಶ್ರೀ ಶಿವ ದೇವಾಲಯ ವಠಾರದಲ್ಲಿ ನ. ೧೭ರಿಂದ ೨೬ರ ವರೆಗೆ ಜರುಗಲಿರುವ ಚತುರ್ವೇದ ಜ್ಞಾನ ಮಹಾಯಜ್ಞದ ಅಂಗವಾಗಿ ಶನಿವಾರ ನಡೆದ ನಕ್ಷತ್ರ ವನ ನಿರ್ಮಾಣಕ್ಕಾಗಿ ಸಸಿಗಳ ನೆಡುವಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು. ತ್ರಿಶ್ಯೂರ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಬ್ರಹ್ಮಸ್ವರೂಪಾನಂದಪುರಿ ಆಶೀರ್ವಚನ ನೀಡಿದರು. ಈ ಸಂದರ್ಭ ಮಹಾಯಜ್ಞದ ಸ್ವಾಗತ ಸಮಿತಿ ಕಚೇರಿಯನ್ನು ಅನಿವಾಸಿ ಉದ್ಯಮಿ ವಿಜಯನ್ ಕರಿಪ್ಪೊಡಿ ಉದ್ಘಾಟಿಸಿದರು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್ ನಕ್ಷತ್ರವನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟ್ ಅಧ್ಯಕ್ಷ ಓ.ಕೆ ಜಯಚಮದ್ರನ್ ಪ್ರಸ್ತವಿಕ ಮಾತುಗಳನ್ನಾಡಿದರು. ಲಕ್ಷ್ಮೀನಾರಾಯಣ ಪಟ್ಟೇರಿ ಕಾವುಮಠ, ಕೆ. ಶಶಿಧರ್ ಐಎಎಸ್, ವಲಯ ಅರಣ್ಯಾಧಿಕಾರಿ ಕೆ. ಗಿರೀಶ್, ಮಧುಸೂದನ್ ಅಯಾರ್ ಮಂಗಳೂರು, ಸುರೇಶ್ ವೈದ್ಯರ್ ಪಯ್ಯನ್ನೂರು, ಬಾಬು ವೈದ್ಯರ್ ಎರ್ನಾಕುಳಂ ಉಪಸ್ಥಿತರಿದ್ದರು. ಈ ಸಂದರ್ಭ ಅಪೂರ್ವ ಭತ್ತದ ತಳಿಗಳ ಸಂಗ್ರಾಹಕ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಶಾಲುಹೊದಿಸಿ, ಫಲಪುಷ್ಪ, ಸಮರಣಿಕೆ ನೀಡಿ ಗೌರವಿಸಲಾಯಿತು. ಡಾ. ಕೆ. ಮುರಳೀಧರನ್ ಹರಿಜಾಲ್ ಸ್ವಾಗತಿಸಿದರು. ಲೋಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಕಾನತ್ತೂರು ವಂದಿಸಿದರು.
ದೇವಾಲಯದ ಎದುರುಭಾಗದ ಬಯಲಲ್ಲಿ ಸುಸಜ್ಜಿತ ನಕ್ಷತ್ರವನ ನಿರ್ಮಾಣಕ್ಕಾಗಿ ತ್ರಿಶ್ಯೂರ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಬ್ರಹ್ಮಸ್ವರೂಪಾನಂದಪುರಿ ಹಾಗೂ ಲಕ್ಷ್ಮೀನಾರಾಯಣ ಪಟ್ಟೇರಿ ಕಾವುಮಠ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ನ. ೧೭ರಿಂದ ೨೬ರ ವರೆಗೆ ಚತುರ್ವೇದ ಜ್ಞಾನ ಮಹಾಯಜ್ಞ ನಡೆಯಲಿದ್ದು, ತಮಿಳುನಾಡಿನ ಚಿದಂಬರಂ ಶ್ರೀ ನಟರಾಜ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಮಹಾದೇವ ದೀಕ್ಷಿತ್ ಅವರ ಮುಖ್ಯ ಪೌರೊಹಿತ್ಯ ವಹಿಸುವರು. ನಾಲ್ಕು ಯಜ್ಞಶಾಲೆಗಳಲ್ಲಾಗಿ ೧೬ ಸ್ಥಳಗಳಲ್ಲಿ ಹತ್ತು ದಿನಗಳ ಕಾಲ ಯಜ್ಞ ನಡೆಯಲಿದ್ದು, ಐದನೇ ಯಜ್ಞಶಾಲೆಯಲ್ಲಿ ವೇದ ಮಂತ್ರಗಳೊಂದಿಗೆ ಹೋಮಪೂಜಾದಿ ಕಾರ್ಯಗಳು ನೆರವೇರಲಿವೆ. ಯಜ್ಞದ ಅಧ್ಯಯನ ಮತ್ತು ಸಂಶೋಧನೆಗಾಗಿ ದೇಶ ವಿದೇಶಿ ವಿಜ್ಞಾನಿಗಳು, ವಿಶ್ವದ ವಿವಿಧ ದೇಶಗಳಿಂದ ವೈದಿಕ ಪಂಡಿತರು, ವಿವಿಧ ವಿಶ್ವವಿದ್ಯಾನಿಲಯದಿಂದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.