ನವದೆಹಲಿ: ಮುಂದಿನ ವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 'ವಿಪತ್ತು ನಿರ್ವಹಣಾ ಕಾನೂನು ತಿದ್ದುಪಡಿ' ಸೇರಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲಾಗುತ್ತದೆ.
ನವದೆಹಲಿ: ಮುಂದಿನ ವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 'ವಿಪತ್ತು ನಿರ್ವಹಣಾ ಕಾನೂನು ತಿದ್ದುಪಡಿ' ಸೇರಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲಾಗುತ್ತದೆ.
ಹಣಕಾಸು ಮಸೂದೆ ಜೊತೆಗೆ, ವಿಮಾನಯಾನ ವಲಯದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಡುವ ನಿಬಂಧನೆಗಳನ್ನು ಒದಗಿಸಲು, 1934ರ ವಿಮಾನ ಕಾಯ್ದೆಯ ಬದಲಿಗೆ 'ಭಾರತೀಯ ವಾಯುಯಾನ ವಿಧೇಯಕ 2024' ಅನ್ನು ಮಂಡಿಸಲಾಗುತ್ತದೆ.
ಇವುಗಳ ಜೊತೆಗೆ, 'ಕಾರ್ಖಾನೆಗಳ ಬಾಯ್ಲರ್ ಮಸೂದೆ', 'ಕಾಫಿ ಪ್ರಚಾರ ಮತ್ತು ಅಭಿವೃದ್ಧಿ ಮಸೂದೆ', 'ರಬ್ಬರ್ ಅಭಿವೃದ್ಧಿ ಮತ್ತು ಪ್ರಚಾರ ಮಸೂದೆ'ಯನ್ನು ಮಂಡಿಸಲಾಗುತ್ತದೆ ಎಂದು ಗುರುವಾರ ರಾತ್ರಿ ಲೋಕಸಭೆ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 22ರಿಂದ ಆಗಸ್ಟ್ 12ರವರೆಗೆ ಅಧಿವೇಶನ ನಡೆಯಲಿದ್ದು, ಜುಲೈ 23ರ ಮಂಗಳವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣ ಮಾಡಲಿದ್ದಾರೆ.