ಕಾಸರಗೋಡು: 2023ನೇ ಡಿಸೆಂಬರ್ 31ರ ವರೆಗಿನ ಸಾಮಾಜಿಕ ಭದ್ರತೆ, ಕಲ್ಯಾಣ ಮಂಡಳಿಯ ಪಿಂಚಣಿ ಫಲಾನುಭವಿಗಳ ಮಸ್ಟರಿಂಗ್ ಸೌಲಭ್ಯ ಅಕ್ಷಯ ಕೇಂದ್ರಗಳಲ್ಲಿ ನಡೆಸಬೇಕಾಗಿದೆ. ಮಸ್ಟರಿಂಗ್ ಮಾಡಲು ಅಕ್ಷಯ ಕೇಂದ್ರಕ್ಕೆ ಬರುವವರು ಪಿಂಚಣಿ ಚೀಟಿ ಮತ್ತು ಆಧಾರ್ ಕಾರ್ಡು ಕೊಂಡೊಯ್ಯಬೇಕು ಎಂದು ಅಕ್ಷಯ ಜಿಲ್ಲಾ ಯೋಜನಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.