ಕಾಸರಗೋಡು : ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಕಾಸರಗೋಡಿನಲ್ಲಿ ಜರುಗಿತು. ತಳಿಪರಂಬ ಲೂರ್ದ್ ಆಸ್ಪತ್ರೆ ಅಧೀಕ್ಷಕ ಹಾಗೂ ಕೇರಳ ಐಎಂಎ ರಾಜ್ಯಾಧ್ಯಕ್ಷ ಡಾಕ್ಟರ್ ಜೋಸೆಫ್ ಬೆನವನ್ ಸಮಾರಂಭ ಉದ್ಘಾಟಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೋಟೇರಿಯನ್ ಡಾ.ಬಿ. ನಾರಾಯಣ ನಾಯ್ಕ್ ನೂತನ ಅಧ್ಯಕ್ಷರಾಗಿ ಪದಾರೋಹಣ ಗ್ಯೆದರು. ರೋಟೇರಿಯನ್ ಹರಿ ಪ್ರಸಾದ್ ಕಾರ್ಯದರ್ಶಿಯಾಗಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಬಡವರಿಗಾಗಿ ಈ ವರ್ಷ 3 ಹೊಸ ಮನೆಗಳು, ವೃದ್ಧರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ರಕ್ಷಣೆ, ಸಾಮಾಜಿಕ ಅರಣ್ಯೀಕರಣ, ಹೊಸ ರೋಟ್ರಾಕ್ಟ್ ಕ್ಲಬ್ ರಚನೆ, ವೈದ್ಯಕೀಯ ಶಿಬಿರಗಳು, ಜೀವ ರಕ್ಷಕ ತರಬೇತಿ ತರಗತಿಗಳು, ಉಚಿತ ಜೀವ ರಕ್ಷಕ ಉಪಕರಣಗಳ ಅಳವಡಿಕೆ ಹೀಗೆ ಹಲವು ಹೊಸ ಯೋಜನೆಗಳನ್ನು ನಡೆಸಲು ತೀರ್ಮಾನಿಸಲಾಯಿತು. ರೋಟರಿ ಸಹಾಯಕ ಗವರ್ನರ್ ವಿ.ವಿ.ಹರೀಶ್, ವಲಯ ಸಂಯೋಜಕ ಎಂ.ಕೆ.ರಾಧಾಕೃಷ್ಣನ್, ಜಿಲ್ಲಾ ಸಮ್ಮೇಳನಾಧ್ಯಕ್ಷ ಎಂ.ಟಿ. ದಿನೇಶ್, ಗವರ್ನರ್ ಗ್ರೂಪ್ ಪ್ರತಿನಿಧಿ ಡಾ.ಜನಾರ್ದನ ನಾಯ್ಕ್ ಸಿ.ಎಚ್., ಡಾ.ಸುರೇಶ್ ಬಾಬು, ಪಿಎಂ ಮೀಡಿಯಾ ಅಧ್ಯಕ್ಷ ಆರ್. ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.
ಪ್ರಥಮ ಮಹಿಳೆ ಡಾ. ಎಸ್.ಜ್ಯೋತಿ ಅವರಿಗೆ ಕ್ಲಬ್ ಬುಲೆಟಿನ್ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಕೆ. ಹರಿಪ್ರಸಾದ್ ವಂದಿಸಿದರು.