HEALTH TIPS

ಪುಸ್ತಕ ಬಹುಮಾನಕ್ಕೆ ಅರ್ಜಿಗಳ ಆಹ್ವಾನ

          ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಿಗೆ ಸಂಬಂಧಿಸಿದಂತೆ ಪುಸ್ತಕ ಬಹುಮಾನಕ್ಕಾಗಿ ಲೇಖಕರು ಹಾಗೂ ಪ್ರಕಾಶಕರಿಂದ 2022 ಹಾಗೂ 2023ನೇ ಸಾಲಿನಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಆಹ್ವಾನಿಸಿದೆ.

           ಆಯ್ಕೆಯಾದ ಪುಸ್ತಕಕ್ಕೆ 25 ಸಾವಿರ ರೂ. ಬಹುಮಾನವನ್ನು ನೀಡಲಿದ್ದು, ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹಾರ್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಕಳುಹಿಸಬೇಕು. ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಕೃತಿ ಅಥವಾ ಅಭಿನಂದನ ಕತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿದ್ದು, ಜು. 25ರೊಳಗೆ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು.

               ವಿಳಾಸ: ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-02, ವಿವರಗಳಿಗೆ ದೂ: 080-22113146 ಸಂಪರ್ಕಿಸಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries