ಮುವಾಟ್ಟುಪುಳ: ಕಾಲೇಜಿನ ತರಗತಿ ಕೊಠಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಿಡುತ್ತಿಲ್ಲ ಎಂದು ಆರೋಪಿಸಿ ಎಂಎಸ್‌ಎಫ್-ಎಸ್‌ಎಫ್‌ಐ ವಿದ್ಯಾರ್ಥಿಗಳು ನಿರ್ಮಲಾ ಕಾಲೇಜಿನ ಪ್ರಾಂಶುಪಾಲರನ್ನು ಅವರ ಕಚೇರಿಯಲ್ಲೇ ಹಲವು ಗಂಟೆಗಳ ಕಾಲ ತಡೆಹಿಡಿದ ಘಟನೆ ವರದಿಯಾಗಿದೆ.
ಇದು ಕೇರಳದ ಸ್ವಾಯತ್ತ ಸ್ಥಾನಮಾನ ಹೊಂದಿರುವ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ. ದಶಕಗಳಷ್ಟು ಹಳೆಯದಾದ ಕಾಲೇಜು ಕೋದಮಂಗಲA ಧರ್ಮಪ್ರಾಂತ್ಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಾಲೇಜಿನಲ್ಲಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಮಾಡಲು ವಿಶೇಷ ಸ್ಥಳಾವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರಾಂಶುಪಾಲರನ್ನು ದಿಗ್ಬಂಧನಲಕ್ಕೊಳಪಡಿಸಲಾಯಿತು. ಶುಕ್ರವಾರ ನಮಾಜು ಮಾಡಲು ಕಾಲೇಜು ಸಮೀಪದ ಮಸೀದಿಗೆ ತೆರಳಲು ಯಾವುದೇ ಅಡ್ಡಿ ಇಲ್ಲದಿರುವಾಗ ಕಾಲೇಜಿನಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳ ಗುಂಪು ಧರಣಿ ನಡೆಸಿತು.
ಕಾಲೇಜಿನಲ್ಲಿ ನಿನ್ನೆ ೪ ವಿದ್ಯಾರ್ಥಿನಿಯರು ತರಗತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದು ಸರಿಯಾದ ನಿಲುವು ಅಲ್ಲ ಎಂದು ಶಿಕ್ಷಕರು ಸ್ಪಷ್ಟಪಡಿಸಿದ್ದರು. ನಂತರ ವಿದ್ಯಾರ್ಥಿಗಳು ಮುಷ್ಕರಕ್ಕೆ ಮುಂದಾದರು. ಕಾಲೇಜು ಹಾಸ್ಟೆಲ್ ಕಾಲೇಜು ಸಮೀಪದಲ್ಲಿದೆ. ಇಲ್ಲಿಯೂ ವಿದ್ಯಾರ್ಥಿಗಳು ಹೋಗಿ ಪ್ರಾರ್ಥನೆ ಸಲ್ಲಿಸಲು ಯಾವುದೇ ಅಡ್ಡಿಯಿಲ್ಲ ಎಂದು ಶಿಕ್ಷಕರು ಸ್ಪಷ್ಟಪಡಿಸಿದ್ದರು.
ಆದರೆ ಅದಾಗದು. ಕಾಲೇಜಿನಲ್ಲಿ ಪ್ರಾರ್ಥನೆಗೆ ವಿಶೇಷ ಸ್ಥಳ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದರ ಹಿಂದೆ ಕೇರಳದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮೂಲಭೂತವಾದವನ್ನು ವಿದ್ಯಾರ್ಥಿಗಳಿಗೆ ಚುಚ್ಚುತ್ತಿರುವ ಕೆಲವರಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಇಂತಹವನ್ನು ಒಮ್ಮೆ ಕಾಲೇಜಿನಲ್ಲಿ ಅನುಮತಿಸಿದರೆ, ಇತರ ಎಲ್ಲಾ ಶಾಲೆಗಳಲ್ಲಿ ಪ್ರಾರ್ಥನೆ ಮಾಡಲು ವಿಶೇಷ ಸ್ಥಳ ಮತ್ತು ಮಸೀದಿಯ ಬೇಡಿಕೆ ಹೆಚ್ಚಾಗುತ್ತದೆ ಎಂದು ಭಯ ಉಂಟಾಗಿದೆ.