ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಗ್ರಹಿಸಿದೆ.
ಐತಿಹಾಸಿವಾದ ಕ್ಷೇತ್ರವನ್ನು ಅಪವಿತ್ರಗೊಳಿಸಿ ದೇವಸ್ಥಾನದ ಸೊತ್ತುಗಳನ್ನು ದೋಚುವ ಪ್ರಯತ್ನ ಮಾತ್ರವಲ್ಲ ಇದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಸವಾಲು ಎಂದು ಬಿಜೆಪಿ ಹೇಳಿದೆ. ಪೊಲೀಸರ ನಿಷ್ಕೃಯತೆ ದ್ದು ಕಾಣುತಿದೆ. ಪೋಲೀಸರ ನಿರಂತರ ವೈಫಲ್ಯಕ್ಕೆ ಇದು ಸಾಕ್ಷಿಯಾಗಿದೆ. ಪೋಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಿಜಿಪಿ ಅಗ್ರಹಿಸಿದೆ.
ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ ಪ್ರಕರಣ ಅಧಿಕ ವಾಗುತ್ತಿದೆ. ಇದುವರೆಗೆ ನಡೆದ ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಪೋಲೀಸ್ ಬಂಧಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಕಳವು ನಡೆದ ದೇವಸ್ಥಾನÀಕ್ಕೆ ಬಿಜೆಪಿ ನೇತಾರರದ ವಿಜಯ ಕುಮಾರ್ ರೈ, ಆದರ್ಶ ಬಿ ಎಂ, ಮಣಿಕಂಠ ರೈ ಪದ್ಮನಾಭ ರೈ ಮಿಂಜ, ಸಂತೋಷ ದೈಗೋಳಿ ಕೆ.ವಿ.ಭಟ್, ನಾರಾಯಣ ತುಂಗಾ ಮೊದಲದವರು ಬೇಟಿ ನೀಡಿದರು.