ತಿರುವನಂತಪುರ: ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ಉದ್ಯೋಗ ತೆರಿಗೆಯನ್ನು ತೀವ್ರವಾಗಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೊಸ ತೆರಿಗೆ ಸುಧಾರಣೆಯು ಕಡಮೆ ಮತ್ತು ಮಧ್ಯಮ ಆದಾಯ ಗಳಿಸುವವರ ಮೇಲೆ ಪರಿಣಾಮ ಬೀರಲಿದೆ.
ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡ ನಂತರ ಸರ್ಕಾರ ಆರನೇ ಹಣಕಾಸು ಆಯೋಗದ ಶಿಫಾರಸುಗಳನ್ನು ತರಾತುರಿಯಲ್ಲಿ ಜಾರಿಗೊಳಿಸಿತು.
11,999 ವರೆಗೆ 6 ತಿಂಗಳ ಸಂಬಳ ಹೊಂದಿರುವವರಿಗೆ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. 12,000 ರಿಂದ 17,999 ರೂ.ವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ದರವನ್ನು 120 ರೂ.ನಿಂದ 320 ರೂ.ಗೆ ಹೆಚ್ಚಿಸಲಾಗಿದೆ. 18,000 ರಿಂದ 29,999, ಹೊಸ ತೆರಿಗೆ 450 ರೂ. ವರೆಗೆ ಅಧ|ಇಕಗೊಳಿಸಲಾಗಿದ್ದು ಮೊದಲು 180 ರೂ.ಮಾತ್ರವಿತ್ತು.
30,000 ರಿಂದ 44,999 ಸಂಬಳ ಪಡೆಯುವವರು ಉದ್ಯೋಗ ತೆರಿಗೆ ಇನ್ನು ರೂ 600 ಹೆಚ್ಚುವರಿ ನೀಡಬೇಕು. (ಹಿಂದೆ ರೂ 300). 45,000 ರಿಂದ 99,999 ರೂ ವರೆಗೆ ರೂ.750 (ಹಿಂದೆ ರೂ 450). ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಸಂಬಳ ಬಂದರೂ ಈಗಿನಂತೆ 1250 ರೂಪಾಯಿ ಪಾವತಿಸಬೇಕು.
ತಿಂಗಳ ಆದಾಯದ ಮೇಲೆ ವರ್ಷಕ್ಕೆ ಎರಡು ಬಾರಿ ತೆರಿಗೆ ಪಾವತಿಸಲಾಗುತ್ತದೆ. ಉದ್ಯೋಗ ತೆರಿಗೆಯನ್ನು ವಿಧಿಸುವ ಅಧಿಕಾರವು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇರುತ್ತದೆ.