HEALTH TIPS

ರಾಷ್ಟ್ರಪತಿ ಭವನದ 'ದರ್ಬಾರ್‌ ಹಾಲ್‌' ಈಗ 'ಗಣತಂತ್ರ ಮಂಟಪ'

          ವದೆಹಲಿ: ರಾಷ್ಟ್ರಪತಿ ಭವನದಲ್ಲಿನ 'ದರ್ಬಾರ್‌ ಹಾಲ್‌' ಅನ್ನು 'ಗಣತಂತ್ರ ಮಂಟಪ' ಎಂದು, 'ಅಶೋಕ ಹಾಲ್' ಅನ್ನು 'ಅಶೋಕ ಮಂಟಪ' ಎಂಬುದಾಗಿ ಗುರುವಾರ ಮರುನಾಮಕರಣ ಮಾಡಲಾಗಿದೆ.

          ಈ ಕುರಿತು ಪ್ರಕಟಣೆ ನೀಡಿರುವ ರಾಷ್ಟ್ರಪತಿಗಳ ಸಚಿವಾಲಯ, 'ರಾಷ್ಟ್ರಪತಿ ಭವನವು ಭಾರತದ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಹೆಚ್ಚು ಪ್ರತಿಬಿಂಬಿಸುವಂತೆ ಮಾಡುವ ಪ್ರಯತ್ನದ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ' ಎಂದು ತಿಳಿಸಿದೆ.

           'ದರ್ಬಾಲ್‌ ಹಾಲ್‌'ನಲ್ಲಿ ರಾಷ್ಟ್ರೀಯ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮ ಸೇರಿದಂತೆ ಮಹತ್ವದ ಸಭೆ- ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುತ್ತದೆ.

           ಬ್ರಿಟಿಷರ ಆಳ್ವಿಕೆಯಲ್ಲಿ ಸಭಾಂಗಣಗಳನ್ನು 'ದರ್ಬಾರ್‌' ಎಂದು ಕರೆಯಲಾಗುತ್ತಿತ್ತು. ಭಾರತವು ಗಣತಂತ್ರವಾದ ನಂತರ 'ದರ್ಬಾರ್‌' ಎಂಬುದು ತನ್ನ ಪ್ರಸ್ತುತತೆ ಕಳೆದುಕೊಂಡಿತು. ಅನಾದಿ ಕಾಲದಿಂದಲೂ ಭಾರತೀಯ ಸಮಾಜದಲ್ಲಿ 'ಗಣತಂತ್ರ' ಎಂಬ ಪರಿಕಲ್ಪನೆ ಹಾಸುಹೊಕ್ಕಾಗಿದೆ. ಹೀಗಾಗಿ ಈ ಸಭಾಂಗಣಕ್ಕೆ 'ಗಣತಂತ್ರ ಮಂಟಪ' ಎಂಬ ಹೆಸರೇ ಸೂಕ್ತ' ಎಂದು ಪ್ರಕಟಣೆ ತಿಳಿಸಿದೆ.

              ರಾಷ್ಟ್ರಪತಿ ಭವನದಲ್ಲಿನ ರಂಗಮಂದಿರವನ್ನು ಈವರೆಗೆ 'ಅಶೋಕ ಹಾಲ್‌' ಎಂದು ಕರೆಯಲಾಗುತ್ತಿತ್ತು. ಈಗ ಇದು, 'ಅಶೋಕ ಮಂಟಪ' ಎಂದು ಮರುನಾಮಕರಣಗೊಂಡಿದೆ.

            'ಅಶೋಕ' ಎಂಬ ಪದವು, ಎಲ್ಲ ಬಗೆಯ ಯಾತನೆಗಳಿಂದ ಮುಕ್ತನಾದ ವ್ಯಕ್ತಿ ಎಂಬ ಅರ್ಥವನ್ನು ಹೊಂದಿದೆ. ಸಾಮ್ರಾಟ್‌ ಅಶೋಕ ಕುರಿತಾಗಿಯೂ ಇದನ್ನೇ ಬಳಸಲಾಗುತ್ತದೆ. ಇದು, ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಸಾರುತ್ತದೆ' ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ಹೇಳಿದೆ.

'ಸಾಮ್ರಾಟ್‌ ಅಶೋಕನ ರಾಜಧಾನಿ ಸಾರಾನಾಥದಲ್ಲಿರುವ ನಾಲ್ಕು ಮುಖದ ಸಿಂಹ ನಮ್ಮ ರಾಷ್ಟ್ರೀಯ ಲಾಂಛನ. ಅಶೋಕ ಎಂಬುದು ಒಂದು ವೃಕ್ಷದ ಹೆಸರೂ ಆಗಿದ್ದು, ಭಾರತೀಯರ ಧಾರ್ಮಿಕ ಪರಂಪರೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಈ ವೃಕ್ಷಕ್ಕೆ ಮಹತ್ವದ ಸ್ಥಾನ ಇದೆ' ಎಂದು ತಿಳಿಸಿದೆ.

            'ಅಶೋಕ ಹಾಲ್‌' ಅನ್ನು 'ಅಶೋಕ ಮಂಟಪ' ಎಂದು ಮರುನಾಮಕರಣ ಮಾಡಿರುವ ಕಾರಣ, ಭಾಷೆ ವಿಚಾರವಾಗಿಯೂ ಏಕರೂಪತೆ ಸಾಧಿಸಿದಂತಾಗಿದೆ' ಎಂದೂ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries