ಕಾಸರಗೋಡು: ಬೋವಿಕ್ಕಾನ ಯುಪಿ ಶಾಲೆಯ ಮಕ್ಕಳ ಪುಸ್ತಕಗಳಿಗೆ ಸಮಾಜ ವಿರೋಧಿಗಳು ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಶಿಕ್ಷಕರು ಶಾಲೆಗೆ ಬಂದಾಗ ತರಗತಿಯಲ್ಲಿ ಪುಸ್ತಕಗಳು ಸುಟ್ಟು ಭಸ್ಮವಾಗಿರುವುದು ಕಂಡು ಬಂದಿದೆ.
ಸಾಮಾನ್ಯವಾಗಿ ಮಕ್ಕಳು ತಮ್ಮ ಪುಸ್ತಕಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. , ಆದರೆ ಕೆಲವು ಪುಸ್ತಕಗಳನ್ನು ತರಗತಿಯಲ್ಲಿ ಇರಿಸಲಾಗುತ್ತದೆ. ಈ ಪುಸ್ತಕಗಳನ್ನು ಸಮಾಜ ವಿರೋಧಿಗಳು ಸುಟ್ಟು ಹಾಕಿದ್ದಾರೆ. ಅಪರಿಚಿತ ಗುಂಪೊಂದು ಕಿಟಕಿಯಿಂದ ಒಳಗೆ ಪ್ರವೇಶಿಸಿ ಕುಕೃತ್ಯ ಎಸಗಿದೆ.
ಇನ್ನೊಂದು ಕೊಠಡಿಯಲ್ಲಿ ಇಟ್ಟಿದ್ದ ಸ್ವಚ್ಛತಾ ಸಾಮಗ್ರಿಗಳಿಗೂ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಒಂದು ವೇಳೆ ಬೆಂಕಿ ಬಿದ್ದಿದ್ದರೆ ದೊಡ್ಡ ಅಪಾಯ ಸಂಭವಿಸುತ್ತಿತ್ತು. ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಶಾಲೆಯ ಮೇಲೆ ಈ ಹಿಂದೆಯೂ ದಾಳಿ ನಡೆದಿತ್ತು. ಬೇಸಿಗೆ ರಜೆಯಲ್ಲಿ ಶಾಲೆಯ ಬಾಗಿಲು ಒಡೆಯುವ ಯತ್ನವೂ ನಡೆದಿದೆ. ಪುಸ್ತಕ ಸುಟ್ಟಿರುವ ಬಗ್ಗೆ ಪೋಲೀಸರಿಗೆ ಶಾಲಾ ಅಧಿಕೃತರು ದೂರು ನೀಡಿದ್ದಾರೆ.