ಕಾಸರಗೋಡು: ಮಣಿಪಾಲದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಮತ್ತು ರಂಗಚಿನ್ನಾರಿ ಕಾಸರಗೋಡು ಇದರ ಜಂಟಿ ಸಹಯೋಗ ಮತ್ತು ಬೆಂಗಳೂರಿನ ಕನ್ನಡ-ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ರಂಗ ಸಂಸ್ಕøತಿ ಕಾರ್ಯಕ್ರಮ ಜು. 28ರಂದು ಬೆಳಗ್ಗೆ 9ರಿಂದ ಮಣಿಪಾಲ ಸರಳೆಬೆಟ್ಟು ರತ್ನ ಸಂಜೀವ ಕಲಾಮಂಡಲದಲ್ಲಿ ಜರುಗಲಿದೆ.
ಖ್ಯಾತ ರಂಗ ನಿರ್ದೇಶಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅವರ ನಿರ್ದೇಶನದಲ್ಲಿ ಮೂಕಾಭಿನಯ, ಧ್ವನಿ, ನಡೆಮ ಪ್ರಸಾದನ, ಆಶುಕವಿತೆ ಬಗ್ಗೆ ತರಬೇತಿ ನಡೆಯಲಿರುವುದು.