HEALTH TIPS

ಚಾಗೋಸ್‌ ಬಿಕ್ಕಟ್ಟು | ಮಾರಿಷಿಯಸ್‌ಗೆ ಬೆಂಬಲ ಅಚಲ: ಭಾರತ

Top Post Ad

Click to join Samarasasudhi Official Whatsapp Group

Qries

            ಪೋರ್ಟ್‌ ಲೂಯಿಸ್: ಚಾಗೋಸ್‌ ದ್ವೀಪಸಮೂಹಕ್ಕೆ ಸಂಬಂಧಿಸಿದ ಸಮಸ್ಯೆ ವಿಚಾರವಾಗಿ ಮಾರಿಷಿಯಸ್‌ಗೆ ತಾನು ನೀಡಿರುವ ಬೆಂಬಲ ಅಚಲವಾದುದು ಎಂದು ಭಾರತ ಮಂಗಳವಾರ ಹೇಳಿದೆ.

            ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಮಾರಿಷಿಯಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಭಾರತದ ಈ ನಿಲುವನ್ನು ದ್ವೀಪ ರಾಷ್ಟ್ರಕ್ಕೆ ತಿಳಿಸಿದರು.

             ಪ್ರಧಾನಿ ಪ್ರವಿಂದಕುಮರ್‌ ಜುಗ್ನಾಥ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜೈಶಂಕರ್‌, 'ಮಾರಿಷಿಯಸ್‌ನೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಎದುರು ನೋಡುತ್ತದೆ. ಚಾಗೋಸ್‌ ದ್ವೀಪಸಮೂಹ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾರಿಷಿಯಸ್‌ಗೆ ನೀಡಿರುವ ಬೆಂಬಲವನ್ನು ಭಾರತ ಮುಂದುವರಿಸಲಿದೆ' ಎಂದರು.

                 ಭಾರತದ ಈ ನಿಲುವಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಮನೀಷ್‌ ಗಾಬಿನ್, 'ಮಾರಿಷಿಯಸ್‌ಗೆ ಭಾರತ ನೀಡಿರುವ ಬೆಂಬಲವನ್ನು ಮುಂದುವರಿಸುವುದಾಗಿ ಮತ್ತೊಮ್ಮೆ ದೃಢಪಡಿಸಿರುವ ಜೈಶಂಕರ್ ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ' ಎಂದು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries