HEALTH TIPS

ಆರ್ಯಭಟ ಪ್ರಶಸ್ತಿ ಪುರಸ್ಕøತ ಕೆ.ಕೆ ಶೆಟ್ಟಿ ಅವರಿಗೆ ಮುಜುಂಗಾವಲ್ಲಿ ಗೌರವಾಭಿನಂದನೆ.

         ಕುಂಬಳೆ:  ಉದ್ಯಮಿ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಾಲಯದ ಆಡಳಿತ ಮೊಕ್ತೇಸರರಾದ ಆರ್ಯಭಟ ಪ್ರಶಸ್ತಿ ಪುರಸ್ಕೃತ, ಶ್ರೀ ಕೆ.ಕೆ ಶೆಟ್ಟಿ ಇವರಿಗೆ ಅಭಿನಂದನಾ ಕಾರ್ಯಕ್ರಮ ಮುಜುಂಗಾವು  ಶ್ರೀ ಭಾರತಿ ವಿದ್ಯಾಪೀಠದಲ್ಲಿ ನಿನ್ನೆ ನಡೆಯಿತು. 

           ವಿದ್ಯಾಲಯದ   ಸಂಸ್ಕೃತ ಅಧ್ಯಾಪಕ ಬಾಲಕೃಷ್ಣ ಶರ್ಮ ಇವರು ಪ್ರಾಸ್ತಾವಿಕದೊಂದಿಗೆ ಅಭಿನಂದನಾ ನುಡಿಗಳನ್ನಾಡಿದರು. ಆಡಳಿತ ಸಮಿತಿ ಅಧ್ಯಕ್ಷ  ಎಸ್ .ಎನ್ ರಾವ್ ಮುನ್ನಿಪ್ಪಾಡಿ ಅವರು ಉದ್ಯಮಿ , ದಾನಿಗಳಾದ  ಕೆ.ಕೆ ಶೆಟ್ಟಿ ಇವರನ್ನು  ಸನ್ಮಾನಿಸಿದರು. ಕೆ .ಕೆ. ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಗುರಿ ಇರಬೇಕು ಮತ್ತು ಅದಕ್ಕಾಗಿ ಶ್ರಮಿಸಬೇಕು" ಎಂದು ಕರೆಯಿತ್ತರು.

           ಹವ್ಯಕ ಮಹಾಮಂಡಲದ ಮಂಗಳೂರು ಪ್ರಾಂತೀಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಕೆ .ಕೆ ಶೆಟ್ಟಿಯವರನ್ನು ಅಭಿನಂದಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರೂ, ಪತ್ರಕರ್ತರೂ ಆದ ಭಾಸ್ಕರ್ ರೈ ಕುಕ್ಕುವಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆರ್ಯಭಟ ಪ್ರಶಸ್ತಿಯ ಹಿರಿಮೆಯನ್ನು ಪ್ರಸ್ತುತ ಪಡಿಸಿದರು. 

        ಉದ್ಯಮಿ  ಕೆ ಪಿ ರೈ ಕುತ್ತಿಕಾರು, ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ, ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ದರ್ಭೆಮಾರ್ಗ, ಹಾಗೂ ಸಹ ಮುಖ್ಯ ಶಿಕ್ಷಕಿ ಚಿತ್ರಾಸರಸ್ವತೀ ಅವರು ಉಪಸ್ಥಿತರಿದ್ದರು. 

      ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶರಣ್ಯ  ಸ್ವಾಗತಿಸಿ ಪುಷ್ಪಲತಾ ವಂದಿಸಿದರು. ಅಧ್ಯಾಪಕ  ಹರಿಪ್ರಸಾದ್ ನಿರೂಪಿಸಿರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries