ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನಕಟ್ಟೆ ಮಸೀದಿ ಸನಿಹ ಕಾರು ಮಗುಚಿಬಿದ್ದ ಪರಿಣಾಮ ಯುವಕ ಮೃತಪಟ್ಟಿದ್ದು, ಇವರ ಸಹೋದರ ಗಂಭೀರ ಗಾಯಗೊಂಡಿದ್ದಾನೆ. ಮವಿನಕಟ್ಟೆ ನಿವಾಸಿ ಕಲಂದರ್ ಸಮ್ಮಾಸ್(21)ಮೃತಪಟ್ಟವರು. ಇವರ ಸಹೋದರ ಮೊಯ್ದೀನ್ ಸರ್ವಾಸ್ ಗಂಭೀರ ಗಾಐಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಹೋದರರಿಬ್ಬರು ಸಂಬಂಧಿಕರ ಮನೆಗೆ ತೆರಳಿ ವಾಪಸಾಗುವ ಮಧ್ಯೆ ಶುಕ್ರವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಕಲಂದರ್‍ಸಮ್ಮಾಸ್ ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು, ಗಂಭೀರ ಗಾಐಗೊಂಡಿದ್ದರು. ತಕ್ಷಣ ಇಬ್ಬರನ್ನೂ ಚೆಂಗಳದ ಸಹಕಾರಿ ಅಸ್ಪತ್ರೆಗೆ ದಾಖಲಿಸಿದರೂ, ಕಲಂದರ್‍ಸಮ್ಮಾಸ್ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಗಂಭೀರ ಗಾಐಗೊಂಡ ಮೊಯ್ದೀನ್ ಸರ್ವಾಸ್ ಅವರನ್ನು ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಂದರ್ ಸಮ್ಮಾಸ್ ಬದಿಯಡ್ಕದ ಬೇಕರಿಯೊಂದರ ಉದ್ಯೋಗಿಯಾಗಿದ್ದರು.