ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೇರಳ ಸರ್ಕಾರ 2023-24ನೇ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಯು.ಎಸ್.ಎಸ್. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಸ್ಕಾಲರ್ಶಿಪ್ ಅರ್ಹತೆ ಪಡೆದದ್ದಲ್ಲದೆ, `ಗಿಫ್ಟೆಡ್ ಚೈಲ್ಡ್'ಪದವಿ ಗಿಟ್ಟಿಸಿಕೊಂಡ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಭಿನವ್ ಕೃಷ್ಣ ಶರ್ಮಾ ಕೆ. ಈತ ಕುರುಮುಜ್ಜಿ ಪ್ರಭಾತ್ ಶರ್ಮಾ ಹಾಗೂ ರಮ್ಯಾ ದಂಪತಿಯ ಸುಪುತ್ರ.