ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಎರಡು ದಿನಗಳ ಕಾಲ ಜರಗಿದ ಸಂಗೀತೋತ್ಸವ ಶುಕ್ರವಾರ ಸಮಾರೋಪಗೊಂಡಿತು.
ನಾಡಿನ ಖ್ಯಾತ ಸಂಗೀತ ವಿದ್ವಾಂಸರು ಈ ಉತ್ಸವದಲ್ಲಿ ಭಾಗವಹಿಸಿದ್ದರು. ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಅವರ ನಿರ್ದೇಶನದಲ್ಲಿ ಶುಕ್ರವಾರ ಜರಗಿದ "ಲಯಲಾವಣ್ಯ ತಾಳವಿದ್ಯಾ' ಸಂಗೀತ ರಸಿಕರ ಮನಸೆಳೆಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ವಿವಿಧ ವಾದ್ಯ ಪರಿಕರಗಳ ಕಲಾವಿದರು ಭಾಗವಹಿಸಿ ತಮ್ಮ ಪ್ರೌಢಿಮೆಯನ್ನು ಮೆರೆದರು. ದೇಶ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದಂತಹ ಸಂಗೀತ ಕಲಾವಿದರಿಗೆ ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.