ಕುಂಬಳೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕುಂಬಳೆ ವ್ಯಾಪಾರಿ ಭವನದಲ್ಲಿ ಯುವ ಘಟಕದ ಮಹಾಸಭೆ ನಡೆಯಿತು. ಅಧ್ಯಕ್ಷತೆಯನ್ನು ಯುವ ಘಟಕದ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ರೆಹಮಾನಿಯಾ ವಹಿಸಿದ್ದರು. ಕೆ.ವಿ.ವಿ.ಇ.ಎಸ್ ಕುಂಬಳೆ ಘಟಕದ ಅಧ್ಯಕ್ಷ ರಾಜೇಶ್ ಮನೆಯಾಟ್, ಪ್ರಧಾನ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ. ಕೋಶಾಧಿಕಾರಿ ಅನ್ವರ್ ಸೀದಿ ಮತ್ತಿತರರು ಯುವವಾಹಿನಿ ಮತ್ತಿತರ ವಿಷಯಗಳ ಕುರಿತು ಮಾತನಾಡಿದರು. ವರ್ತಕರ ಸಂಘಕ್ಕೆ ಬಲಿಷ್ಠ ಯುವ ನಾಯಕತ್ವ ಇರಬೇಕು ಎಂದು ವಿನಂತಿಸಿದರು. ಈ ಸಂದರ್ಭ ಯುವ ಘಟಕದ ೨೦೨೪/೨೬ ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಬ್ದುಲ್ ಖಾದರ್ ರೆಹಮಾನಿಯಾ(ಅಧ್ಯಕ್ಷ),. ಅಶ್ರಫ್ ಸ್ಕೆöÊಲರ್(ಪ್ರಧಾನ ಕಾರ್ಯದರ್ಶಿ), ಸಂತೋಷ್ ಪೆರ್ವಾಡ್(ಖಜಾಂಜಿ) ಉಪಾಧ್ಯಕ್ಷರು ಸಂತೋಷ್ ಎ.ಕೆ., ಅಬ್ದುಲ್ ಲತೀಫ್ ಕೂಲ್ ಕಾರ್ನರ್, ಹೈದರ್ ಅಲಿ, ಜಂಟಿ ಕಾರ್ಯದರ್ಶಿಗಳಾಗಿ. ಸಿದ್ದಿಕ್ ಮುಬಾರಕ್ ಅನ್ವರ್ ಚಿಕನ್, ನವಾಜ್ ಫ್ರಾಪಿಟ್‌ಟ್ ಮೊಬೈಲ್ ಮತ್ತು ಇತರರು ಆಯ್ಕೆಯಾದರು. ಪದಾಧಿಕಾರಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಸ್ಕೈಲರ್ ಸ್ವಾಗತಿಸಿ, ವಂದಿಸಿದರು.