ಕುಂಬಳೆ : ಕುಂಬಳೆ ಪಂಚಾಯತಿನ ವ್ಯಾಪಕ ಭ್ರಷ್ಟ್ಟಾಚಾರ ಪ್ರಕರಣಗಳಲ್ಲಿ ಕುಂಬಳೆ ಪಂಚಾಯತಿ ಅಧ್ಯಕ್ಷರು ನೇರವಾಗಿ ಶಾಮಿಲಾಗಿದ್ದು, ಅಧ್ಯಕ್ಷರು ಕೂಡಲೇ ರಾಜಿನಾಮೆ ನೀಡಬೇಕೆಂದು ಅಗ್ರಹಿಸಿ ಕುಂಬಳೆ ಪಂಚಾಯತಿ ಮುಂಭಾಗದಲ್ಲಿ ಆ. ೫ ರಂದು ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು. ಪ್ರತಿಭಟನೆಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷÀ ರವೀಶ್ ತಂತ್ರಿ ಕುಂಟಾರು ನಿರ್ವಹಿಸಲಿರುವರು ಎಂದು ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ತಿಳಿಸಿದೆ. ಈ ಬಗ್ಗೆ ಮಂಗಳವಾರ ಕುಂಬಳೆಯ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಬಿಜೆಪಿ ಕುಂಬಳೆ ಪಂಚಾಯತಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ,ಮಂಡಲ ಅಧ್ಯಕ್ಷÀ ಸುನಿಲ್ ಕುಮಾರ್ ಅನಂತಪುರ,ಮAಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ, ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್, ಮಂಡಲ ಕಾರ್ಯದರ್ಶಿ ಕೆ ಸುಧಾಕರ್ ಕಾಮತ್, ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ,ಕುಂಬಳೆ ಮಂಡಲ ಕಚೇರಿ ಕಾರ್ಯದರ್ಶಿ ಶಶಿ ಕುಂಬಳೆ, ಯುವಮೋರ್ಚ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ಪಂಚಾಯತಿಯ ಜನಪ್ರತಿನಿದಿನಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಪಂಚಾಯತಿ ಸದಸ್ಯ ಅಜಯ ಎಂ ಸ್ವಾಗತಿಸಿ, ವಿದ್ಯಾ ಎನ್ ಪೈ ವಂದಿಸಿದರು. ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಬಿಜೆಪಿ ಕರೆ ನೀಡಿದೆ.