ಪೆರ್ಲ :ವಾಚನೋತ್ಸವದ ಅಂಗವಾಗಿ ಜಿಲ್ಲಾ ಮಾಹಿತಿ ಕೇಂದ್ರ ಆಯೋಜಿಸಿದ ಯು ಪಿ ವಿದ್ಯಾರ್ಥಿಗಳ "ಕಾಸರಗೋಡಿನ ವಾಚನ" ಎಂಬ ವಾಚನ ಪ್ರಬಂಧ ಸ್ಪರ್ಧೆಯಲ್ಲಿ ಶೇಣಿ ಶ್ರೀ ಶಾರದಾಂಬಾ ಎ. ಯು.ಪಿ ಶಾಲೆಯ ವಿದ್ಯಾರ್ಥಿನಿ ಕು.ಸನ್ನಿಧಿ .ಶೆಟ್ಟಿ ಶೇಣಿ ಪ್ರಥಮ ಬಹುಮಾನ ಗಳಿಸಿಕೊಂಡಿದ್ದಾಳೆ. ನಾಡೋಜ ಕಯ್ಯಾರ ಕಿಂಞಣ್ಣ ರೈ ಯವರ ಕುರಿತು ಬರೆದ ಪ್ರಬಂಧದಲ್ಲಿ ಬಹುಮಾನಕ್ಕೆ ಭಾಜನರಾಗಿದ್ದಾಳೆ. ಶಿಕ್ಷಕ ಶರತ್ಚಂದ್ರ ಶೆಟ್ಟಿ ಶೇಣಿ ಹಾಗೂ ಚಿತ್ರಾಕ್ಷಿ ದಂಪತಿಗಳ ಪುತ್ರಿಯಾದ ಸನ್ನಿಧಿ ಶೆಟ್ಟಿ ಯಕ್ಷಗಾನ, ಸಂಗೀತ, ಭಜನೆ ಹಾಗೂ ಪಠ್ಯ ಚಟುವಟುಕೆಗಳ ಮೂಲಕ ಪ್ರತಿಭಾನ್ವಿತೆಯಾಗಿದ್ದಾಳೆ. ಜು. 04 ರಂದು ಅಪರಾಹ್ನ 2 ಗಂಟೆಗೆ ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ , ಪ್ರಸಿದ್ಧ ಕಾದಂಬರಿಕಾರ ಅಂಬಿಕಾ ಸುತನ್ ಮಾಂಙಡ್ ರವರು ಬಹುಮಾನವನ್ನು ವಿತರಿಸುವರು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.