ಮನೆಯಲ್ಲಿ ನಿಮಗೆ ಸಣ್ಣದಾಗಿ ತಲೆ ನೋವು ಕಾಣಿಸಿಕೊಂಡರೆ ತಕ್ಷಣ ಔಷಧಿ, ಮಾತ್ರೆ ನೆನಪಾಗುವ ಜೊತೆಗೆ ಕೆಲವರಿಗೆ ಟೀ ನೆನಪಾಗುತ್ತದೆ. ಹೌದು ತಲೆ ನೋವು ಬಂದರೆ ಕೆಲವು ಟೀ ಕುಡಿಯಲು ಮುಂದಾಗುತ್ತಾರೆ. ಮತ್ತೆ ಕೆಲವರು ಇಂದು ಟೀ ಕುಡಿದಿಲ್ಲ ಹೀಗಾಗಿಯೇ ತಲೆ ನೋವು ಕಾಣಿಸಿಕೊಂಡಿದೆ ಎಂದುಕೊಳ್ಳುತ್ತಾರೆ.
ಕೆಲವರಿಗೆ ನಿತ್ಯ 4 ರಿಂದ 5 ಟೀ ಅಥವಾ ಅದಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅದ್ರಲ್ಲಿ ಒಂದು ಬಾರಿ ಮಿಸ್ ಆದರು ಇಡೀ ದಿನ ಚಡಪಡಿಸುತ್ತಾರೆ, ಇನ್ನು ಹಲವರು ಸಮಯಕ್ಕೆ ಸರಿಯಾಗಿ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅವರಂತು ನಿಂತರು ಕುಂತರು ಟೀ ಬೇಕೇ ಬೇಕು.ಆದ್ರೆ ನಾವಿಲ್ಲಿ ಹೇಳುತ್ತಿರೋದು ಟೀಗೂ ತಲೆ ನೋವಿಗೂ ಇರುವ ನಂಟಿನ ಬಗ್ಗೆ. ನಮ್ಮಲ್ಲಿ ಬಹುತೇಕರು ಟೀ ಕುಡಿಯುವುದೇ ತಲೆ ನೋವು ದೂರಾಗಿಸಲು ಹಾಗೂ ಒಂದು ನೆಮ್ಮದಿಯ ಕಂಡುಕೊಳ್ಳಲು. ಕೆಲವರಿಗೆ ಟೀ ಕುಡಿದರೆ ಮೈ ಕೈ ನೋವು, ಒತ್ತಡ ನಿವಾರಣೆಯಾಗುತ್ತೆ ಎಂದು ನಂಬಿರುತ್ತಾರೆ. ಬಹುತೇಕ ಪ್ರಕರಣದಲ್ಲಿ ಇದು ನಿಜವೂ ಹೌದು ಏಕೆಂದರೆ ಚಾಯ್‌ನಲ್ಲಿ ಕೆಫೀನ್ ಮಟ್ಟ ಅಧಿಕವಾಗಿರುತ್ತದೆ. ಇದು ನಮ್ಮ ದೇಹಕ್ಕೆ ಸೇರಿದಾಗ ಎನರ್ಜಿ ಜನರೇಟ್ ಮಾಡಲಿದೆ. ಹೀಗಾಗಿ ಟೀ ಕುಡಿದ ಬಳಿಕ ಸುಸ್ತು ನಿವಾರಣೆ, ಹೆಚ್ಚು ಶಕ್ತಿ ಬಂದಂತೆ ಅನಿಸುತ್ತದೆ.
ಆದ್ರೆ ನಾವಿಲ್ಲಿ ಹೇಳುತ್ತಿರೋದು ಟೀಗೂ ತಲೆ ನೋವಿಗೂ ಇರುವ ನಂಟಿನ ಬಗ್ಗೆ. ನಮ್ಮಲ್ಲಿ ಬಹುತೇಕರು ಟೀ ಕುಡಿಯುವುದೇ ತಲೆ ನೋವು ದೂರಾಗಿಸಲು ಹಾಗೂ ಒಂದು ನೆಮ್ಮದಿಯ ಕಂಡುಕೊಳ್ಳಲು. ಕೆಲವರಿಗೆ ಟೀ ಕುಡಿದರೆ ಮೈ ಕೈ ನೋವು, ಒತ್ತಡ ನಿವಾರಣೆಯಾಗುತ್ತೆ ಎಂದು ನಂಬಿರುತ್ತಾರೆ.
ಬಹುತೇಕ ಪ್ರಕರಣದಲ್ಲಿ ಇದು ನಿಜವೂ ಹೌದು ಏಕೆಂದರೆ ಚಾಯ್‌ನಲ್ಲಿ ಕೆಫೀನ್ ಮಟ್ಟ ಅಧಿಕವಾಗಿರುತ್ತದೆ. ಇದು ನಮ್ಮ ದೇಹಕ್ಕೆ ಸೇರಿದಾಗ ಎನರ್ಜಿ ಜನರೇಟ್ ಮಾಡಲಿದೆ. ಹೀಗಾಗಿ ಟೀ ಕುಡಿದ ಬಳಿಕ ಸುಸ್ತು ನಿವಾರಣೆ, ಹೆಚ್ಚು ಶಕ್ತಿ ಬಂದಂತೆ ಅನಿಸುತ್ತದೆ.
ಆದ್ರೆ ತಲೆ ನೋವಿಗೂ ಟೀಗೂ ಇರುವ ಸಂಬಂಧ ಕುರಿತು ತಜ್ಞರ ಅಭಿಪ್ರಾಯವೇನು?
ಟೀ ಪ್ರಪಂಚದ ಉದ್ದಕ್ಕೂ ಜನರು ಸವಿಯುವ ಒಂದು ಫೇಮಸ್ ಪಾನೀಯವಾಗಿದೆ. ಈಗಂತು ಈ ಟೀನಲ್ಲಿ ಎಷ್ಟೊಂದು ವಿಧ ಬಂದಿದೆ ಅಂದ್ರೆ ನೀವು ಎಲ್ಲಿಯೂ ಕೇಳಿಯೂ ಇರಲ್ಲ, ಟೇಸ್ಟ್ ಸಹ ಮಾಡಿರುವುದಿಲ್ಲ. ಆದ್ರೆ ಟೀ ಕುಡಿಯುವುದು ತಲೆನೋವನ್ನು ನಿವಾರಿಸಲಿದೆ ಎಂಬುದು ಯಾವುದೇ ಪುರಾವೆಗಳಿಲ್ಲ. ಆದರೆ ಕೆಫಿನ್‌ನಿಂದಾಗಿ ದೇಹದಲ್ಲಿ ರಕ್ತ ಪರಿಚಲನೆಗೆ ಸಹಾಯಕವಾಗಿದೆ. ಇದು ತಲೆನೋವು ನಿವಾರಣೆಯ ಕಾರಣೀಕೃತ ಅಂಶವಾಗಿರಬಹುದು ಎಂದು ಮುಂಬೈನ ಹಿರಿಯ ವೈದ್ಯ ಮತ್ತು ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಡಾ ರೂಹಿ ಪಿರ್ಜಾಡಾ ಹೇಳಿದ್ದಾರೆ.
ಟೀ ಮೂಗಿನ ಸೈನಸ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಸೈನಸೈಟಿಸ್‌ನಿಂದ ಉಂಟಾಗುವ ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ನಿರೂಪಿಸುವುದು ಬಹಳ ಕಷ್ಟವಾಗಿದೆ. ಟೀ ಕುಡಿಯುವುದು ಹಲವು ಆರೋಗ್ಯ ಪ್ರಯೋಜನಗಳ ಹೊಂದಿದೆ ಎಂಬುದಂತು ಸತ್ಯ. ಆದರೆ ಸಕ್ಕರೆ ಟೀ ನಮ್ಮ ದೇಹಕ್ಕೆ ಅನಾರೋಗ್ಯ ತರಲು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಸಕ್ಕರೆ ಟೀ ಬದಲಿಗೆ ಆರೋಗ್ಯಯುತ ಗ್ರೀನ್ ಟೀ, ಬೆಲ್ಲದ ಟೀ, ಮಸಾಲೆ ಟೀಗಳ ಮೊರೆ ಹೋಗುವುದು ಉತ್ತಮ.
ಸಕ್ಕರೆ ಟೀ ಬದಲು ಶುಂಠಿ- ಏಲಕ್ಕಿ ಟೀ ಟೀ ರುಚಿಯಾಗಿದ್ದರೆ ಸವಿಯಲು ಇಷ್ಟ ಎನ್ನುವವರು ಸಕ್ಕರೆ ಹಾಕಿದ ಟೀಯನ್ನೇ ಸವಿಯುತ್ತಾರೆ, ಆದ್ರೆ ಸಕ್ಕರೆ ಕಡಿಮೆ ಬಳಸಿ ಟೀ ಜೊತೆಗೆ ಶುಂಠಿ, ಏಲಕ್ಕಿ ಹಾಕಿರುವ ಟೀ ಕುಡಿದರೆ ಆರೋಗ್ಯಕ್ಕೆ ಬಹಳ ಅತ್ಯುತ್ತಮ ಪಾನೀಯ ಇದಾಗಿರಲಿದೆ. ಚಾಯ್ ತಲೆನೋವಿನಿಂದ ಸಹಾಯ ಮಾಡಬಹುದು, ಆದರೆ ಅದರ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಸಾಮಾನ್ಯವಾಗಿ ಟೀಯಲ್ಲಿ ಬಳಸುವ ಶುಂಠಿ, ಏಲಕ್ಕಿ ಮತ್ತು ದಾಲ್ಚಿನ್ನಿಗಳಂತಹ ಮಸಾಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಇನ್ನು ಮೈಗ್ರೇನ್ ರೋಗಿಗಳಿಗೆ ಚಿಕಿತ್ಸೆ ನೀಡಲು ಶುಂಠಿ ಪರಿಣಾಮಕಾರಿ ಎಂದು 2020ರ ಅಧ್ಯಯನದಲ್ಲಿ ತಿಳಿದುಬಂದಿದೆ.