ಹರಿದ್ವಾರ : ಹರಿದ್ವಾರದ ಮಂಗ್‌ಲೌರ್‌ನಲ್ಲಿ ಕಾವಡ್ ಯಾತ್ರಿಕರು ಸಾಗುತ್ತಿದ್ದ ಮಾರ್ಗದಲ್ಲಿ ಯಾತ್ರಿಕರೊಬ್ಬರಿಗೆ ಇ-ರಿಕ್ಷಾ ಡಿಕ್ಕಿ ಹೊಡೆದಿರುವ ಘಟನೆಗೆ ಸಂಬಂಧಿಸಿ ಸಂಘರ್ಷ ನಡೆದಿದೆ.
ಹರಿದ್ವಾರ : ಹರಿದ್ವಾರದ ಮಂಗ್‌ಲೌರ್‌ನಲ್ಲಿ ಕಾವಡ್ ಯಾತ್ರಿಕರು ಸಾಗುತ್ತಿದ್ದ ಮಾರ್ಗದಲ್ಲಿ ಯಾತ್ರಿಕರೊಬ್ಬರಿಗೆ ಇ-ರಿಕ್ಷಾ ಡಿಕ್ಕಿ ಹೊಡೆದಿರುವ ಘಟನೆಗೆ ಸಂಬಂಧಿಸಿ ಸಂಘರ್ಷ ನಡೆದಿದೆ.
ಅಪಘಾತದಿಂದ ಆಕ್ರೋಶಗೊಂಡ ಇತರೆ ಯಾತ್ರಿಕರು ಚಾಲಕನನ್ನು ಮನಸೋಇಚ್ಛೆ ಥಳಿಸಿದ್ದಾರೆ.
'ರಸ್ತೆಯಲ್ಲಿ ಸಾಗುತ್ತಿದ್ದಾಗ ಇ-ರಿಕ್ಷಾ ಆಕಸ್ಮಿಕವಾಗಿ ಭೋಲೆಗೆ (ಯಾತ್ರಾರ್ಥಿ) ಡಿಕ್ಕಿ ಹೊಡೆಯಿತು. ಆದರೆ, ಘಟನೆಯಲ್ಲಿ ಭೋಲೆಗೆ ಯಾವುದೇ ರೀತಿಯ ಗಾಯವಾಗಿರಲಿಲ್ಲ. ಇದರ ಹೊರತಾಗಿಯೂ ಯಾತ್ರಿಕರು ಮತ್ತು ಸ್ಥಳೀಯರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಇ-ರಿಕ್ಷಾವನ್ನು ಧ್ವಂಸಗೊಳಿಸಿದ್ದಾರೆ ಎಂದು ರಿಕ್ಷಾ ಚಾಲಕ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಲಾಗುತ್ತಿದೆ ಎಂದು ಹರಿದ್ವಾರದ ಎಸ್‌ಪಿ ಪ್ರಮೋದ್ ದೋಭಾಲ್ ಹೇಳಿದ್ದಾರೆ.
'ಕಾವಡ್ ಯಾತ್ರೆ'ಯ ಮಾರ್ಗಗಳಲ್ಲಿರುವ ತಿಂಡಿ-ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹೊರಡಿಸಿದ್ದ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ಈಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.